ಐಗಳಿ ಕ್ರಾಸ್ ಮಾಣಿಕಪ್ರಭು ವಿರಕ್ತ ಮಠದ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಠಿಯಲ್ಲಿ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಮಾತನಾಡಿದರು. ಗುರುಸಿದ್ಧೇಶ್ವರ ಸ್ವಾಮೀಜಿ, ಪ್ರಹ್ಲಾದ ಪಾಟೀಲ, ಬಸವರಾಜ ಬಿರಾದಾರ ಇತರರಿದ್ದರು.
- ಶಾಸಕ ಶಹಜಹಾನ್ ಡೊಂಗರಗಾಂವ ಅಭಿಪ್ರಾಯ
- ಶಿವಾನುಭವಗೋಷ್ಠಿ
ಐಗಳಿ: ಸಮಾಜದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಕಷ್ಟದ ಸಮಯದಲ್ಲಿ ನ್ಯಾಯ ಒದಗಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತವೆ. ರೈತರು, ರಾಜಕಾರಣಿಗಳು ಪತ್ರಕರ್ತರಿಗೆ ಋಣಿಯಾಗಿದ್ದೇವೆ ಎಂದು ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಹೇಳಿದರು.
ಇಲ್ಲಿನ ಮಾಣಿಕಪ್ರಭು ವಿರಕ್ತಮಠದ ಜಾತ್ರೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಠಿಯಲ್ಲಿ ಮಾತನಾಡಿ, ನಾಡಿಗೆ ಭಾವೈಕ್ಯ ಸಂದೇಶ ನೀಡುವಲ್ಲಿ ಪತ್ರಕರ್ತರ ಶ್ರಮವಿದೆ. ಸತ್ಯಾಸತ್ಯತೆ ಅರಿತು ಸುದ್ದಿ ಪ್ರಸಾರ ಮಾಡಬೇಕು. ಮಕ್ಕಳ ಬಗ್ಗೆ ಪಾಲಕರು ಗಮನಹರಿಸಬೇಕು ಎಂದರು.
ಮುತ್ತೂರ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಜಾತ್ರೆಗೆ ಬರುವಾಗ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಇಟ್ಟುಕೊಂಡು ಬರಬೇಕು ಎಂದು ಹೇಳಿದರು. ಗ್ರಾಮೀಣ ಪತ್ರಕರ್ತರ ಸಂಘದ ಅಧ್ಯಕ್ಷ ಜಗದೀಶ ಖೋಬ್ರಿ ಮಾತನಾಡಿದರು.
ಸರ್ಪಭೂಷಣ ದೇವರು, ಅಭಿನವ ರಾಚೋಟೇಶ್ವರ ದೇವರು, ಮಾತೋಶ್ರೀ ಪ್ರಮಿಳಾತಾಯಿ ಆಶೀರ್ವಚನ ನೀಡಿದರು. ಜಾತ್ರಾ ಕಮಿಟಿ ಅಧ್ಯಕ್ಷ ಪ್ರಹ್ಲಾದ ಪಾಟೀಲ, ಅಪ್ಪಾಸಾಹೇಬ ಪಾಟೀಲ, ಬಸವರಾಜ ಬಿರಾದಾರ, ಬೈರು ಬಿಜ್ಜರಗಿ, ಭೀಮು ತೊರವಿ, ಬಂದೇನವಾಜ್ ಮುಜಾವರ್, ಎ.ಎಸ್. ನಾಯಿಕ, ಎನ್.ಜಿ.ಪಾಟೀಲ, ಬಾಳು ಮುಜಾವರ್, ಸಿದ್ದಪ್ಪ ಬಳ್ಳೊಳ್ಳಿ, ಬೈರು ಹುಣಸಿಕಟ್ಟಿ, ಕೆ.ಎಸ್.ಬಿರಾದಾರ, ಕೆ.ಎಸ್. ಬಿಜ್ಜರಗಿ ಇತರರಿದ್ದರು.