ರಾಯಬಾಗದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ರಾಯಬಾಗ ಮಂಡಲ ಬಿಎಲï‌ಎ-೨ ಕಾರ್ಯಾಗಾರವನ್ನು ಶಾಸಕ ಡಿ.ಎಂ.ಐಹೊಳೆ, ಈರಣ್ಣ ಕಡಾಡಿ ಉದ್ಘಾಟಿಸಿದರು. 
ಬೆಳಗಾವಿ

ದೇಶದ ಏಕತೆಗೆ ಒಗ್ಗಟ್ಟು ಪ್ರದರ್ಶಿಸಲಿ

ರಾಯಬಾಗ: ದೇಶದ ಹಲವು ಪ್ರಾಂತ್ಯ ಒಗ್ಗೂಡಿಸಿ ಭಾರತವನ್ನು ಸದೃಢ ದೇಶವನ್ನಾಗಿ ಮಾಡಿದ ಸರ್ದಾರ್‌ವಲ್ಲಭಭಾಯಿ ಪಟೇಲ ಅವರ ಬಗ್ಗೆ ಯುವಜನರು ತಿಳಿದುಕೊಳ್ಳುವ ಮೂಲಕ ದೇಶದ ಏಕತೆಗೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ ಅವರ ೧೫೦ನೇ ಜನ್ಮದಿನ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ನಡಿಗೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಶ ಮೊದಲು ಎಂಬ ಸಂಕಲ್ಪವನ್ನು ಯುವಜನರಲ್ಲಿ ಮೂಡಿಸಬೇಕು. ಸ್ವದೇಶಿ ವಸ್ತುಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಉತ್ತೇಜನ ನೀಡುವುದು ಏಕತಾ ನಡಿಗೆಯ ಉದ್ದೇಶವಾಗಿದೆ ಎಂದರು.
ಬಳಿಕ ಜರುಗಿದ ಬಿಜೆಪಿ ರಾಯಬಾಗ ಮಂಡಲ ಬಿಎಲ್ಎ-೨ ಕಾರ್ಯಾಗಾರ ಉದ್ಘಾಟಿಸಿದ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಬಿಎಲï‌ಎ ಅವರು ಸರಿಯಾಗಿ ಅಧ್ಯಯನ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕಿದೆ. ಪಕ್ಷದ ಸಂಘಟನೆಗಾಗಿ ಪ್ರತಿಯೊಬ್ಬರೂ ತಳಮಟ್ಟದಿಂದ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಹೇಳಿದರು.
ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಮಹೇಶ ಭಾತೆ, ದುಂಡಪ್ಪ ಭೆಂಡವಾಡೆ, ಸದಾಶಿವ ಹಳಿಂಗಳಿ, ರಾಜಶೇಖರ ಖನದಾಳೆ, ರಾಜು ಹರಗಣ್ಣವರ, ಬಸಗೌಡ ಪಾಟೀಲ, ಅಮಿತ್ ಜಾಧವ, ಮಹಾದೇವ ಬೋರಗಾಂವೆ, ಪಿ.ಎ.ನಾಯಿಕ, ಅನಿಲ ಹಂಜೆ, ಬಸು ಅವ್ವನ್ನವರ, ಅರುಣ ಐಹೊಳೆ, ಶಿವಾನಂದ ನವನಾಳೆ, ಮಹಾದೇವ ಬೋರಗಾಂವೆ, ಮಹೇಶ ಕರಮಡಿ ಇತರರು ಇದ್ದರು.