ಸತ್ತಿ ಗ್ರಾಮದಲ್ಲಿ ಬಾಳಕೃಷ್ಣ ಮಹಾರಾಜರ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿದ್ದಯ್ಯ ಶಾಸ್ತ್ರೀ, ಶ್ರೀಶೈಲ ಜಕ್ಕಪನವರ, ಮಲ್ಲಪ್ಪ ಹಂಚಿನಾಳ, ಆನಂದಕುಮಾರ ಪಾಟೀಲ ಇತರರಿದ್ದರು.
- ಪುಂಡಲೀಕ ಗಾಣಿಗೇರ ಆಶಯ
- ಶ್ರೀ ಬಾಳಕೃಷ್ಣ ಸದ್ಭಾವನಾ ಪ್ರಶಸ್ತಿ ವಿತರಣೆ ಸಮಾರಂಭ
ನಂದೇಶ್ವರ: ದೇಶದಲ್ಲಿ ಹಲವಾರು ಸಂಪ್ರದಾಯಗಳಿವೆ. ಜಾತಿ, ಮತ, ಧರ್ಮ ಎಂಬ ಬೇಧವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಸಂಪ್ರದಾಯ ಉಳಿಸಿ ಬೆಳೆಸೋಣ ಎಂದು ಉದ್ಯಮಿ ಪುಂಡಲೀಕ ಗಾಣಿಗೇರ ಹೇಳಿದರು.
ಸಮೀಪದ ಸತ್ತಿ ಗ್ರಾಮದ ಲಿಂ.ಶ್ರೀ ಬಾಳಕೃಷ್ಣ ಮಹಾರಾಜರ ೨೮ನೇ ಪುಣ್ಯಾರಾಧನೆ ಅಂಗವಾಗಿ ಅಥಣಿ ತಾಲೂಕು ಗಡಿನಾಡು ಕಲಾವಿದರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಬಾಳಕೃಷ್ಣ ಸದ್ಭಾವನಾ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಲಿಂ.ಶ್ರೀ ಬಾಳಕೃಷ್ಣ ಮಹಾರಾಜರು ಸರಳತೆಯಿಂದ ಬದುಕಿ ಸತ್ತಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ನ.೩ರಂದು ಸಂಜೆ ೭ ಗಂಟೆಗೆ ರಾಜ್ಯ ಮಟ್ಟದ ಮುಕ್ತ ಭಜನಾ ಸ್ಪರ್ಧೆ ಜರುಗಲಿದೆ. ಅಥಣಿ ತಾಲೂಕು ಗಡಿನಾಡು ಕಲಾವಿದರ ಸಂಘದ ಅಧ್ಯಕ್ಷ ಶ್ರೀಶೈಲ ಜಕ್ಕಪ್ಪನವರ, ಸಿದ್ದಯ್ಯ ಶಾಸ್ತ್ರೀ, ದಾದಾಗೌಡಾ ಪಾಟೀಲ, ಸುನೀಲ ಗುರೂಜಿ, ಮಲ್ಲಪ್ಪ ಹಂಚಿನಾಳ, ಶಂಕರ ಮಟ್ಟೆಪ್ಪನವರ, ಆನಂದಕುಮಾರ ಪಾಟೀಲ, ಮಾಜಿ ಯೋಧ ಹನುಮಂತ ಪಟೇಕರ, ಮಹಾದೇವ ಮಹೇಶವಾಡಗಿ, ಶ್ರೀಕಾಂತ ನಾಯಿಕ, ಮಲ್ಲಪ್ಪ ಶೇಗುಣಸಿ, ಶ್ರೀನಿವಾಸ ಕುಲಕರ್ಣಿ, ಡಾ.ಶ್ರೀಶೈಲ ಚೌಗಲಾ, ಡಾ.ಕುಮಾರ ಹೊಸಒಕ್ಕಲಿಗ, ರಾವಸಾಬ ಮಟ್ಟೆಪ್ಪನವರ, ಅಶೋಕ ಶೇಟೆ, ರಾಮಣ್ಣ ವಜ್ರಮಟ್ಟಿ, ಶಿವಾನಂದ ಕನಗೌಡರ, ಶಿವಕುಮಾರ ಪಾಟೀಲ, ಬಸವರಾಜ ಮಡಿವಾಳ, ಪ್ರಕಾಶ ಜಗದೇವ, ಶಿವಾನಂದ ನಂದೇಶ್ವರ, ಜ್ಞಾನದೇವ ಹೊನಕಡಬಿ, ವಿಜಯ ಜಕ್ಕಪ್ಪನವರ ಇತರರಿದ್ದರು.