ಮುರಗೋಡ ಹೊರಟ್ಟಿ ಓಣಿಯ 3 ನಂಬರ್ ಅಂಗನವಾಡಿ ನೂತನ ಕಟ್ಟಡವನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಿದರು. ಗ್ರಾಪಂ ಅಧ್ಯೆ ಸಂಕೇತ ಹಟ್ಟಿಹೊಳಿ, ಸಂಗಪ್ಪ ಬೆಳಗಾವಿ, ರಾಜು ಕಲಾಲ ಇದ್ದರು.
ಮುರಗೋಡ: ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ, ರೈತರಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಮಕ್ಕಳ ಆರೋಗ್ಯ ಸುಧಾರಣೆಗೆ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಇಲ್ಲಿನ ಹೊರಟ್ಟಿ ಓಣಿಯ 3 ನಂಬರ್ ಅಂಗನವಾಡಿ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಂಕೇತ ಹಟ್ಟಿಹೊಳಿ, ಉಪಾಧ್ಯೆ ಮಹಾದೇವಿ ಮಬನೂರ, ಪಿಡಿಒ ಡಿ.ಎಸ್.ಕಂಕಣ್ಣವರ, ಎಪಿಎಂಸಿ ಸದಸ್ಯ ರಾಜು ಕಲಾಲ, ಗ್ರಾಪಂ ಮಾಜಿ ಅಧ್ಯ ಸಂಗಪ್ಪ ಬೆಳಗಾವಿ, ಶಿವು ಚೌಡಕನವರ, ಸಂತೋಷ ಶೆಟ್ಟರ, ಶಿವಲಿಂಗ ಕಿತ್ತೂರ, ಪ್ರಕಾಶ ಹಟ್ಟಿಹೊಳಿ, ರಾಜು ತೊರಗಲ ಇತರರಿದ್ದರು.
ಪಾನ್ ಬೀಡಾ ಅಂಗಡಿಯಲ್ಲಿ ಈ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿರುವ ಕುರಿತು ವಿಜಯವಾಣಿ ದಿನಪತ್ರಿಕೆ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.