ಅಥಣಿಯಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಕಾಲ್ನಡಿಗೆ ಜಾಥಾ ಜರುಗಿತು. ನ್ಯಾಯಾಧೀಶ ಇ.ಎಸ್.ಈರಣ್ಣ, ಮಂಜುನಾಥ ಶಿರಾಳೆ, ಶಿವಾನಂದ ಗುಡೋಡಗಿ, ಪ್ರಶಾಂತ ಮುನ್ನೋಳ್ಳಿ, ಡಾ.ಎಂ.ಜಿ.ಹಂಜಿ, ಡಾ.ಸ್ಮಿತಾ ಚೌಗಲಾ ಇತರರಿದ್ದರು.
ಅಥಣಿ: ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಬೇಕು. ಅಪ್ರಾಪ್ತರಿಗೆ ವಾಹನ ಚಲಾವಣೆಗೆ ಅವಕಾಶ ನೀಡಬಾರದು ಎಂದು ೧೧ನೇ ಹೆಚ್ಚುವರಿ ಜಿಲ್ಲಾ ಪ್ರದಾನ ಸಿವಿಲ್ ನ್ಯಾಯಾಧೀಶ ಇ.ಎಸ್.ಈರಣ್ಣ ಹೇಳಿದರು.
ಪಟ್ಟಣದಲ್ಲಿ ೩೭ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಸುರಕ್ಷತಾ ನಿಯಮ ಅನುಸರಿಸಿ ವಾಹನ ಚಲಾಯಿಸಬೇಕು ಎಂದರು.
ಆರ್‌ಟಿಒ ಅಧಿಕಾರಿ ಮಂಜುನಾಥ ಶಿರಾಳೆ ಮಾತನಾಡಿ, ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಹಾಗೂ ಕಾರಿನಲ್ಲಿ ಚಲಿಸುವವರು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು ಎಂದರು.
ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ವಿತರಿಸಲಾಯಿತು. ನ್ಯಾಯಾಧೀಶರಾದ ನಾಮದೇವ ಸಾಲಮಂಟಪಿ, ರವಿಕುಮಾರ, ಓಂಕಾರಮೂರ್ತಿ, ರವೀಂದ್ರ ಹಾವರಗಿ, ಸುನೀತಾ ಪ್ರಬಣ್ಣವರ, ಭಾಗ್ಯಶ್ರೀ ಮಾದರ, ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಆರ್‌ಟಿಒ ಹಿರಿಯ ನಿರೀಕ್ಷಕ ಶಿವಾನಂದ ಗುಡೋಡಗಿ, ಸಹಾಯಕ ಅಽಕಾರಿ ಶ್ರೀರಂಗ ಜೋಶಿ, ಸುನೀಲ ದೇಸಾಯಿ, ರವಿ ದೇಸಾಯಿ, ಜಯೇಂದ್ರ ದೇಸಾಯಿ, ಎಂ.ಆರ್.ಮುಂಜೆ, ಡಾ.ಸ್ಮಿತಾ ಚೌಗಲಾ, ಡಾ.ಎಂ.ಜಿ.ಹಂಜಿ, ಡಾ.ಆನಂದ ಗುಂಜಿಗಾವಿ, ಡಾ.ಮಹೇಶ ಕಾಪಸೆ, ಡಾ.ಜಿ.ಎಸ್.ಪಾಟೀಲ ಇತರರು ಇದ್ದರು.