ಐನಾಪುರ ಪಟ್ಟಣದ ಶ್ರೀ ಧರಿದೇವರ ಹಾಗೂ ಜಕ್ಕಮ್ಮದೇವಿ ಮಂದಿರದ ಕಾರ್ತಿಕೋತ್ಸವ 2ನೇ ದಿನ ಕಾರ್ಯಕ್ರಮದಲ್ಲಿ ಶಶಿಕಾಂತ ಗುರೂಜಿ ಅವರನ್ನು ಸನ್ಮಾನ ಮಾಡಲಾಯಿತು. ಅಮರೇಶ್ವರ ಶ್ರೀಗಳು, ತಮ್ಮಣ್ಣ ಪಾರಶೆಟ್ಟಿ ಇತರರಿದ್ದರು.
ಐನಾಪುರ: ರೈತನನ್ನು ಯಾರೂ ಕಡೆಗಣಿಸಬಾರದು. ರೈತ ಅನ್ನ ಬೆಳೆಯದಿದ್ದರೆ ಎಲ್ಲವೂ ಶೂನ್ಯ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹೇಳಿದರು.
ಪಟ್ಟಣದ ಶ್ರೀ ಧರಿದೇವರ ಹಾಗೂ ಜಕ್ಕಮ್ಮ ದೇವಿ ಮಂದಿರದ 7ನೇ ಕಾರ್ತಿಕೋತ್ಸವ ಹಾಗೂ ಸಿದ್ಧೇಶ್ವರ ಶ್ರೀಗಳ 3ನೇ ಗುರು ಸ್ಮರಣೆಯ ಎರಡನೇ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಭೂಮಿಯೇ ದೇವರೆಂದು ತಿಳಿದು ಹಳ್ಳಿಗರು ಬದುಕುತ್ತಿದ್ದಾರೆ. ಉದ್ದಿಮೆದಾರರ ಹಂಗಿನಲ್ಲಿ ರೈತರು ಇರಬಾರದು. ಇಲ್ಲಿಯ ಭೂಮಿಗೆ ಅಧ್ಯಾತ್ಮದ ದಿವ್ಯ ಶಕ್ತಿ ಇದೆ ಎಂದರು. ಕವಲಗುಡ್ಡ ಸಿರಿಸಿದ್ಧ ಆಶ್ರಮದ ಅಮರೇಶ್ವರ ಮಹಾರಾಜರು ಮಾತನಾಡಿ, ಮಕ್ಕಳು ಪಾಲಕರು ಮನ ನೋಯಿಸದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಐನಾಪುರ ಗುರುದೇವ ಆಶ್ರಮದ ಬಸವೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ತಮ್ಮಣ್ಣ ಪಾರಶೆಟ್ಟಿ, ಹರ್ಷವರ್ಧನ ಪಾಟೀಲ, ಅಶೋಕ ಡಿಗ್ರಜ್, ರಾವಸಾಹೇಬ ಚೌಗಲಾ, ಪ್ರವೀಣ ಕೋತ, ಪ್ರಕಾಶ ಕೋರುಬು, ಪ್ರಕಾಶ ಬಡಿಗೇರ, ಮಹೇಶ ಸೊಲ್ಲಾಪುರೆ, ಭಾಗ್ಯಶ್ರೀ ಪಾರಶೆಟ್ಟಿ ಇತರರಿದ್ದರು.