ಸವದತ್ತಿ ಶಾಸಕರ ಗಹ ಕಚೇರಿಯಲ್ಲಿ ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳು ಸಾಕಣೆ ಸಲಕರಣೆಗಳನ್ನು ಶಾಸಕ ವಿಶ್ವಾಸ ವೈದ್ಯ ವಿತರಿಸಿದರು. ಎಸ್.ಎಂ.ನಾಗೇಶ, ಮುದಕಪ್ಪ ದಳವಾಯಿ, ಹನುಮಂತ ಸಿಂಗನ್ನವರ, ಗಿರೀಶ ಮುನವಳ್ಳಿ ಇತರರಿದ್ದರು. 
ಬೆಳಗಾವಿ

ಸರ್ಕಾರಿ ಸೌಕರ್ಯ ಸದುಪಯೋಗಪಡಿಸಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ವಿಶ್ವಾಸ ವೈದ್ಯ ಆಶಯ
  • ಸವದತ್ತಿಯಲ್ಲಿ ರೇಷ್ಮೆ ಹುಳು ಸಾಕಣೆ ಸಲಕರಣೆ ವಿತರಣೆ
ಸವದತ್ತಿ: ಸರ್ಕಾರ ರೈತರ ಅಭಿವದ್ಧಿಗಾಗಿ ವಿವಿಧ ಯೋಜನೆ ಹಾಗೂ ಸೌಲಭ್ಯ ಜಾರಿಗೆ ತಂದಿದ್ದು, ರೈತರು ಅವುಗಳ ಸದ್ಬಳಕೆ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರದ ಶಾಸಕರ ಗಹ ಕಚೇರಿಯಲ್ಲಿ ಸೋಮವಾರ ರೇಷ್ಮೆ ಇಲಾಖೆಯಿಂದ ಹಮ್ಮಿಕೊಂಡಿದ್ದ ರೇಷ್ಮೆ ಹುಳು ಸಾಕಣೆ ಸಲಕರಣೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಕಷಿಯ ಜತೆಗೆ ಪೂರಕ ಉದ್ಯಮಗಳಾದ ರೇಷ್ಮೆ ಕಷಿ, ಹೈನುಗಾರಿಕೆ ಹಾಗೂ ತೋಟಗಾರಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು. ಸರ್ಕಾರ ರೈತರ ಕಲ್ಯಾಣಕ್ಕಾಗಿ ಅನೇಕ ಯೋಜನೆ ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಲಭ್ಯ ಒದಗಿಸಲು ಬದ್ಧವಾಗಿದೆ. ಇಲಾಖೆಗಳ ಮೂಲಕ ದೊರೆಯುವ ಸೌಲಭ್ಯಗಳನ್ನು ಪ್ರಯೋಜನ ಪಡೆಯಬೇಕು ಎಂದರು.
ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಎಸ್.ಎಂ.ನಾಗೇಶ ಮಾತನಾಡಿದರು. ಕಾರ್ಯಕ್ರಮದಲ್ಲಿ 18 ಮಂದಿ ರೇಷ್ಮೆ ಬೆಳೆಗಾರ ರೈತರಿಗೆ ರೇಷ್ಮೆ ಹುಳು ಸಾಕಣೆಗೆ ಅಗತ್ಯವಾದ ವಿವಿಧ ಸಲಕರಣೆ ವಿತರಿಸಲಾಯಿತು.
ಚಂದ್ರು ಶ್ಯಾಮರಾಯನವರ, ಮುದಕಪ್ಪ ದಳವಾಯಿ, ಆರ್.ಕೆ.ಪಟಾತ, ದ್ಯಾಮಪ್ಪ ಮಲ್ನಾಡ, ಹನುಮಂತ ಸಿಂಗನ್ನವರ, ಗಿರೀಶ ಮುನವಳ್ಳಿ, ಸಂತೋಷ ನೊರೆವರ, ಮೈಲಾರಪ್ಪ ಹೊಸಮನಿ, ಪಂಚಪ್ಪ ಅಡಿವೆಪ್ಪ ದ್ಯಾಮಪ್ಪಗೋಳ, ಶ್ರೀಕಾಂತ ರಾಮಲಿಂಗಪ್ಪ ಪೂಜೇರ, ಅಲ್ಲಪ್ಪ ಗದಿಗೆಪ್ಪ ಚುಳಕಿ, ಆನಂದ ಬಾಳಪ್ಪ ಪೂಜೇರ, ಸಿದ್ದರಾಮೇಶ್ವರ ಸಿದ್ದಪ್ಪ ಕರಿಗಾರ, ಅಭಿಷೇಕ ರಾಜೇಂದ್ರಶೆಟ್ಟಿ, ಆಶಾ ರಾಜೇಂದ್ರಶೆಟ್ಟಿ, ಶಂಕ್ರಯ್ಯ ಚನ್ನಬಸವಯ್ಯ ಹೊಸಮಠ, ಮಂಜುನಾಥ ಸೋಮನಿಂಗ ನಾಶೀಪುಡಿ, ಗಂಗಪ್ಪ ಗುಡಿಯಪ್ಪ ಗುಡಿಕಾರ, ಹನುಮಂತ ಮಾರುತಿ ಕಲಕುಟ್ರಿ ಇತರರಿದ್ದರು.