ನದಿ ಇಂಗಳಗಾಂವ ಗ್ರಾಮದ ಶಿವಯೋಗೀಶ್ವರ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಬಸವೇಶ್ವರಿ ಮಾತಾಜಿ ಇತರರಿದ್ದರು. 
ಬೆಳಗಾವಿ

ಸುಜ್ಞಾನದೆಡೆಗೆ ಸಾಗಲು ಪ್ರವಚನ ಆಲಿಸಲಿ

ಅಥಣಿ ಗ್ರಾಮೀಣ: ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗಲು ಪುರಾಣ, ಪ್ರವಚನ ಕೇಳುವುದು ಅಗತ್ಯವಾಗಿದೆ ಎಂದು ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಶಿವಯೋಗೀಶ್ವರ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಪುರಾಣ, ಪ್ರವಚನಗಳಲ್ಲಿ ಪಾಲ್ಗೊಳ್ಳುವುದರಿಂದ ಮನೋಕಾಮನೆ ನಿಗ್ರಹಿಸಿ ಉದಾತ್ತ ಜೀವನ ನಡೆಸಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಪ್ರವಚನ ಆಲಿಸಬೇಕು ಎಂದರು.
ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಸಂತ, ಶರಣರು ಹಾಗೂ ಸ್ವಾಮೀಜಿಗಳು ಪ್ರವಚನದ ಮೂಲಕ ನೂರಾರು ಜನರ ಬಾಳಿಗೆ ಬೆಳಕಾಗಿದ್ದಾರೆ. ಅಥಣಿ ಶಿವಯೋಗಿಗಳ ತತ್ತ್ವ , ಆದರ್ಶ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಟಕುರ್ಕಿಯ ಚೌಕೀಶ್ವರಮಠದ ಬಸವಲಿಂಗ ಸ್ವಾಮೀಜಿ, ಶಿವಯೋಗೀಶ್ವರಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಅತ್ತಿವೇರಿ ಬಸವೇಶ್ವರಿ ಮಾತಾಜಿ ಪ್ರವಚನ ನೀಡಿದರು. ಮಹಾಂತೇಶ ಗೂಳಪ್ಪನವರ, ಸಂಜೀವ ಮಠಪತಿ, ಮಲ್ಲಪ್ಪ ಠಕ್ಕಣ್ಣವರ, ಮಹಾಂತೇಶ ರಾಚಗೌಡರ, ಎ.ಬಿ.ಚನಗೌಡರ, ಅಪ್ಪಾಸಾಹೇಬ ಠಕ್ಕಣ್ಣವರ, ಪ್ರಕಾಶ ಚನ್ನಣ್ಣವರ, ಬಸಪ್ಪ ಅಂಬಿ, ಶಿವಾನಂದ ಬಾಗೋಜಿಮಠ, ಶಿವಪುತ್ರ ಮಠಪತಿ, ಮಹಾದೇವ ಕೋಳಿ ಇತರರಿದ್ದರು.