ಅಥಣಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸೃಜನ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ ಡಾ.ಎಂ.ಜಿ.ಹಂಜಿ, ಡಾ.ಆನಂದ ಗುಂಜಿಗಾವಿ, ಡಾ.ಪ್ರಶಾಂತ ಮಗದುಮ್ಮ, ಡಾ.ರೇಷ್ಮಾ ಇನಾಮದಾರ, ಶ್ರೀನಿವಾಸ ಕಣಪರ್ತಿ ಇದ್ದರು.
ಅಥಣಿ: ಗ್ರಾಮೀಣ ಪ್ರದೇಶದ ಆಹಾರ ಪದ್ಧತಿ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಅರಿಯಬೇಕು ಎಂದು ಕೆಎಲ್‌ಇ ಸಂಸ್ಥೆ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಹೇಳಿದರು.
ಸ್ಥಳೀಯ ಕೆಎಲ್‌ಇ ಸಂಸ್ಥೆಯ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಮಹಾವಿದ್ಯಾಲಯಗಳ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೃಜನ-೨೦೨೫ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಸೃಜನಾತ್ಮಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇಂತಹ ವೇದಿಕೆಗಳು ಪೂರಕವಾಗಿವೆ ಎಂದರು.
ಚಿಕ್ಕಮಕ್ಕಳ ತಜ್ಞ ಡಾ.ಆನಂದ ಗುಂಜಿಗಾವಿ ಮಾತನಾಡಿ, ವಿದ್ಯಾರ್ಥಿಗಳು ಸೃಜನಶೀಲ ಚಟುವಟಿಕೆಗಳ ಮೂಲಕ ಪ್ರತಿಭೆ ತೋರ್ಪಡಿಸಬೇಕು. ಇದರಿಂದ ಕ್ರಿಯಾತ್ಮಕ ಶಕ್ತಿ ಹೆಚ್ಚುತ್ತದೆ ಎಂದರು.
ವಿಭಿನ್ನ ವಿಭಾಗಗಳಿಂದ ವಿವಿಧ ಸೃಜನಾತ್ಮಕ ಚಟುವಟಿಕೆಗಳು ನಡೆದವು. ವಿಜ್ಞಾನ ವಿಭಾಗದಿಂದ ವಿಜ್ಞಾನೋತ್ಸವ, ಕಲಾ ವಿಭಾಗದಿಂದ ನೃತ್ಯೋತ್ಸವ ಹಾಗೂ ವಾಣಿಜ್ಯ ವಿಭಾಗದಿಂದ ಖಾದ್ಯೋತ್ಸವ ಆಯೋಜಿಸಲಾಯಿತು. ಕಾಲೇಜಿನಿಂದ ಸೇನೆಗೆ ಆಯ್ಕೆಯಾದ ೨೮ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಶಂಭುಲಿಂಗ ಮಮದಾಪುರ, ಪ್ರಕಾಶ ಪಾಟೀಲ, ವಿಜಯ ಬುರ್ಲಿ, ಅಶೋಕ ಬುರ್ಲಿ, ಅಮೃತಾ ಹಳ್ಳದಮಳ, ಕಾಲೇಜಿನ ಪ್ರಾಚಾರ್ಯ ಡಾ.ಪ್ರಶಾಂತ ಮಗದುಮ್ಮ, ಡಾ.ರೇಷ್ಮಾ ಇನಾಮದಾರ, ಶ್ರೀನಿವಾಸ ಕಣಪರ್ತಿ, ಸಂಯೋಜಕ ಐ.ಜಿ.ಮುಲ್ಲಾ, ಎಸ್.ಡಿ.ಕೋಳಿ ಇತರರಿದ್ದರು.