ಚಿಕ್ಕೋಡಿಯಲ್ಲಿರುವ ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವ್ಯಸನಮುಕ್ತ ಕೇಂದ್ರವನ್ನು ೭ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ ಉದ್ಘಾಟಿಸಿದರು. ಡಾ.ಕಿರಣಕುಮಾರ ಮುತ್ನಾಳಿ, ಡಾ.ಸುನೀಲ ಎಂ.ಬಿ. ಇತರರಿದ್ದರು.
- ನ್ಯಾಯಾಧೀಶ ವಿಜಯಕುಮಾರ ಹೇಳಿಕೆ
- ವ್ಯಸನಮುಕ್ತ ಕೇಂದ್ರ ಉದ್ಘಾಟನೆ, ರ‍್ಯಾಲಿಗೆ ಚಾಲನೆ
ಚಿಕ್ಕೋಡಿ: ಯುವ ಜನರು ತಂಬಾಕು ಸೇವನೆಯಿಂದ ದೂರವಿದ್ದು, ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ೭ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ ಹೇಳಿದರು.
ಪಟ್ಟಣದ ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಂಬಾಕು ವ್ಯಸನಮುಕ್ತ ಕೇಂದ್ರವನ್ನು ಉದ್ಘಾಟಿಸಿ ತಂಬಾಕು ಮುಕ್ತ ಜಾಗೃತಿ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗಿ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಕೆಎಲ್‌ಇ ಆಯುರ್ವೇದ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಕಿರಣಕುಮಾರ ಮುತ್ನಾಳಿ ಮಾತನಾಡಿ, ತಂಬಾಕು ಸೇವನೆಯಿಂದ ಭಾರತದಲ್ಲಿ ಪ್ರತಿವರ್ಷ ಸುಮಾರು ೧೩ ಲಕ್ಷ ಜನರು ಸಾಯುತ್ತಿದ್ದಾರೆ. ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ.೯೦ರಷ್ಟು ಪ್ರಕರಣ ತಂಬಾಕು ಬಳಕೆಗೆ ಸಂಬಂಧಿಸಿದೆ. ತಂಬಾಕು ಸಂಬಂಧಿತ ರೋಗಗಳಿಂದ ದೇಶದ ಆರ್ಥಿಕತೆಗೆ ವರ್ಷಕ್ಕೆ ಸುಮಾರು ೧.೭ ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ಎಸ್.ಖಣದಾಳೆ, ಜಿಲ್ಲಾ ತಂಬಾಕು ವ್ಯಸನಮುಕ್ತ ಕೇಂದ್ರದ ಮುಖ್ಯಸ್ಥೆ ಡಾ.ಶ್ವೇತಾ ಪಾಟೀಲ ಮಾತನಾಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಂಬಾಕು ಬಳಕೆ ವಿರುದ್ಧ ಜಾಗೃತಿ ಮೂಡಿಸಲಾಯಿತು.
ಉಪವಿಭಾಗಾಧಿಕಾರಿ ಸುಭಾಸ ಸಂಪಗಾವಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಅರುಣಕುಮಾರ, ಪೊಲೀಸ್ ಉಪನಿರೀಕ್ಷಕ ಬಸಗೌಡ ನೇರ್ಲಿ, ಕೆಎಲ್‌ಇ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಡಾ.ಸುನೀಲ ಎಂ.ಬಿ., ಆರ್.ಬಿ.ಹಿತ್ತಲಮನಿ, ಆರ್.ಎಂ.ಮಿರ್ಜೆ, ಅನ್ನಪೂರ್ಣಾ ಚೌಗಲಾ, ಮೀನಾಕ್ಷಿ ಪಾಟೀಲ, ಬಸವರಾಜ ಬಿ., ಡಾ.ನೀತಿನ ಪಾಟೀಲ, ಡಾ.ಸಂತೋಷ ಶಿವಣ್ಣನವರ, ಡಾ.ರವಿ ಮಡಿವಾಳರ, ಡಾ.ಶ್ರೀಧರ ಲಕ್ಕುಂಡಿ ಇತರರಿದ್ದರು.