ಕೋಹಳ್ಳಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶ ಓಂಕಾರಮೂರ್ತಿ ಎಚ್. ಉದ್ಘಾಟಿಸಿದರು. ವಿಠ್ಠಲ ಕಂಕಣವಾಡಿ, ಚಂದ್ರಶೇಖರ ಗಸ್ತಿ ಇತರರಿದ್ದರು. 
ಬೆಳಗಾವಿ

ಜೀತಪದ್ಧತಿ ನಿರ್ಮೂಲನೆ ಜಾಗೃತಿ ಹೆಚ್ಚಾಗಲಿ

ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಕ್ಸೋ, ಬಾಲ್ಯವಿವಾಹ, ಬಾಲಕಾರ್ಮಿಕ ನಿಷೇಧ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀತಪದ್ದತಿ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಹೆಚ್ಚಾಗಬೇಕು. ಜೀತಪದ್ಧತಿ ಗಮನಕ್ಕೆ ಬಂದರೆ ಕೂಡಲೇ ತಾಲೂಕು ಅಧಿಕಾರಿಗಳಿಗೆ ತಿಳಿಸಬೇಕು. ಹೆಣ್ಣುಮಕ್ಕಳಿಗೆ ತೊಂದರೆ ನೀಡಿದರೆ ಮಕ್ಕಳ ಸಹಾಯವಾಣಿ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.
ವಕೀಲ ವಿಠ್ಠಲ ಕಂಕಣವಾಡಿ ಮಾತನಾಡಿ, ವಿದ್ಯಾರ್ಥಿಗಳು ಕಾನೂನು ತಿಳಿದುಕೊಂಡು ಜಾಗೃತರಾಗಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕ ಚಂದ್ರಶೇಖರ ಗಸ್ತಿ ಮಾತನಾಡಿದರು. ವಕೀಲರಾದ ಎಸ್.ಬಿ.ಮುಧೋಳ, ಗಣೇಶ ಪೂಜಾರಿ, ಯು.ಕೆ.ಝರೆ, ವಿ.ಸಿ.ಕಾಂಬಳೆ, ಎಸ್‌ಡಿಎಂಸಿ ಅಧ್ಯಕ್ಷ ಉದಯಕುಮಾರ ಪೂಜಾರಿ, ತುಕಾರಾಮ ದೇವಖಾತೆ, ಭೀಮಣ್ಣ ಉಮರಾಣಿ, ಸಿದ್ದು ಶಿಳ್ಳಿನ, ಅಂಗನವಾಡಿ ವಲಯ ಮೇಲ್ವಿಚಾರಕಿ ಸುಜಾತಾ ಮಸರಕಲ್ಲ ಇತರರಿದ್ದರು.