ಬೋರಗಾಂವದ ಪಿಎಂಶ್ರೀ ಮರಾಠಿ ಶಾಲೆಯಲ್ಲಿ ಉಪನಿರ್ದೇಶಕ ಯಲ್ಲೇಶ ಕಾಳೆ ಮಾತನಾಡಿದರು. ಎಸ್.ಬಿ. ಪಾಟೀಲ, ಶಿವಾಜಿ ಭೋರೆ ಇತರರಿದ್ದರು.
ಬೋರಗಾಂವ: ಕಠಿಣ ಪರಿಶ್ರಮದ ಮೂಲಕ ಶಿಕ್ಷಣ ಪಡೆಯಬೇಕು. ಪರಿಸ್ಥಿತಿ ದೋಷಿಸದೇ ಅದನ್ನು ಸಾಧನವಾಗಿ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ವಿಜಯನಗರದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯಲ್ಲೇಶ ಕಾಳೆ ಹೇಳಿದರು.
ಇಲ್ಲಿನ ಪಿಎಂಶ್ರೀ ಮರಾಠಿ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಮಾತನಾಡಿದ ಅವರು, ಶಿಕ್ಷಣಕ್ಕೆ ಪ್ರಾಮುಖ್ಯ ನೀಡಬೇಕು. ಭ್ರಷ್ಟಾಚಾರ, ಅನ್ಯಾಯ ಮತ್ತು ದೌರ್ಜನ್ಯ ವಿರುದ್ಧ ಹೋರಾಡುವ ಮನೋಭಾವ ಈಗಿನಿಂದಲೇ ಬೆಳಸಿಕೊಳ್ಳಬೇಕು. ಪಾಲಕರು ಮತ್ತು ಶಿಕ್ಷಕರನ್ನು ಗೌರವಿಸಬೇಕು. ಸರ್ಕಾರಿ ಯೋಜನೆ ಲಾಭ ಪಡೆದು ಗುರಿ ತಲುಪಬೇಕು ಎಂದರು.
ನಿವೃತ್ತ ಮುಖ್ಯಶಿಕ್ಷಕ ಎಸ್.ಬಿ.ಪಾಟೀಲ, ಆರ್.ಎ.ಇಂಗಳೆ, ಆನಂದ ಕಾಳೆ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷೆ ಶಿವಾಜಿ ಭೋರೆ, ಉಪಾಧ್ಯಕ್ಷೆ ಸ್ವಾತಿ ಶಿಂಗೆ, ನಿರ್ದೇಶಕಿ ಸುಜಾತಾ ಪಾಟೀಲ, ಮುಖ್ಯಶಿಕ್ಷಕ ಆರ್.ಎಂ.ಪಕಾಲೆ, ಐ.ವೈ.ಮುಲ್ಲಾ, ಎಸ್.ಎಸ್.ಗೆರೆಪುಜಾರಿ ಇತರರಿದ್ದರು.