ರಾಯಬಾಗ ಪಟ್ಟಣದ ಎಸ್‌ಪಿಎಂ ಆನಂದಿಬಾಯಿ ಬಾಲಕಿಯರ ಪ್ರೌಢಶಾಲೆ ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜಿನ ಸ್ನೇಹಸಮ್ಮೇಳನವನ್ನು ಅಮರಸಿಂಹ ಪಾಟೀಲ ಉದ್ಘಾಟಿಸಿದರು. ಎಸ್.ಎಂ.ಐಹೊಳೆ, ಎಸ್.ಎಸ್.ಶಿಂಗಾಡಿ ಇತರರಿದ್ದರು.
ಧೈರ್ಯದಿಂದ ಪರೀಕ್ಷೆ ಎದುರಿಸಲಿ
ರಾಯಬಾಗ: ವಿದ್ಯಾರ್ಥಿಗಳು ಒತ್ತಡಕ್ಕೊಳಗಾಗದೇ ಧೈರ್ಯದಿಂದ ಪರೀಕ್ಷೆ ಎದುರಿಸಿ ಯಶಸ್ವಿಯಾಗಬೇಕು ಎಂದು ಮೂಡಲಗಿ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ ಉಪನ್ಯಾಸಕ ಪ್ರೊ.ಎಸ್.ಎಂ.ಐಹೊಳೆ ಕರೆ ನೀಡಿದರು.
ಪಟ್ಟಣದ ಶಿಕ್ಷಣ ಪ್ರಸಾರಕ ಮಂಡಳದ ಆನಂದಿಬಾಯಿ ಬಾಲಕಿಯರ ಪ್ರೌಢಶಾಲೆ ಮತ್ತು ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಸ್ನೇಹಸಮ್ಮೇಳನ ಸಮಾರಂಭದಲ್ಲಿ ಮಾತನಾಡಿ, ಸಾಧಕರನ್ನು ಆದರ್ಶವಾಗಿ ಇರಿಸಿಕೊಂಡಾಗ ಜೀವನದಲ್ಲಿ ಸಾಧನೆ ಸಾಧ್ಯ ಎಂದರು. ಸಂಸ್ಥೆ ಕಾರ್ಯದರ್ಶಿ ಎಸ್.ಎಸ್.ಶಿಂಗಾಡಿ ಮಾತನಾಡಿದರು. ಸಾದನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆ ಅಧ್ಯಕ್ಷ ಅಮರಸಿಂಹ ಪಾಟೀಲ, ಪ್ರಾಚಾರ್ಯ ಬಿ.ಎಸ್.ಶಿಂಗೆ, ಆರ್.ಎಸ್.ಗುಡೋಡಗಿ, ಅಕ್ಷಯ ಬನಾಜ, ಎಸ್.ಎಸ್.ಕಾಂಬಳೆ, ಕೀರ್ತಿ ತೇಲಿ, ಸರಿತಾ ಪುಟಾಣಿ, ಸಂತೋಷ ಐಹೊಳೆ, ಬಿ.ಎಸ್.ಶಿಂಗೆ ಇತರರಿದ್ದರು.