ಐನಾಪುರದ ಸಿದ್ಧೇಶ್ವರ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಶಾಂತ ಮುನ್ನೋಳ್ಳಿ ಮಾತನಾಡಿದರು. ಸಂತೋಷ ಹಳ್ಳೂರ, ಅರುಣ ಗಾಣಿಗೇರ, ದಾದಾ ಪಾಟೀಲ ಇತರರಿದ್ದರು.
ಐನಾಪುರ: ಪಟ್ಟಣದಲ್ಲಿ ಐದು ದಿನಗಳ ಕಾಲ ನಡೆಯುವ ಸಿದ್ಧೇಶ್ವರ ಜಾತ್ರೆ ಹಾಗೂ ಕೃಷಿ ಮೇಳದಲ್ಲಿ ಅಹಿತಕರ ಘಟನೆ ಹಾಗೂ ಪ್ರಾಣಿ ಹಿಂಸೆಯಾಗದಂತೆ ಜಾತ್ರಾ ಕಮಿಟಿ ನಿಗಾವಹಿಸಬೇಕೆಂದು ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಸೂಚಿಸಿದರು.
ಪಟ್ಟಣದ ಸಿದ್ಧೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾತ್ರೆ ಹಾಗೂ ಶರ್ಯತ್ತು ನಡೆಸಲು ಸರ್ಕಾರ ವಿಧಿಸಿರುವ ನಿಯಮ ಪಾಲಿಸಬೇಕು. ಬೃಹತ್ ಕೃಷಿಮೇಳ ಜರುಗುವುದರಿಂದ ಜನದಟ್ಟಣೆ ಕುರಿತು ಮುನ್ನೆಚ್ಚರಿಕೆ ವಹಿಸಬೇಕು. ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದರು.
ಸಿಪಿಐ ಸಂತೋಷ ಹಳ್ಳೂರ, ಪಪಂ ಸದಸ್ಯ ಅರುಣ ಗಾಣಿಗೇರ, ದಾದಾ ಪಾಟೀಲ ಮತ್ತು ಪಶುವೈದ್ಯಾಧಿಕಾರಿ ಅಭಿನಂದ ಪಾಟೀಲ ಮಾತನಾಡಿದರು.
ಪಪಂ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಕಾಗವಾಡ ಪಿಎಸ್‌ಐ ರಾಘವೇಂದ್ರ ಖೋತ, ಜಾತ್ರಾ ಕಮಿಟಿ ಅಧ್ಯಕ್ಷ ದಾದಾಸಾಬ ಜಂತೆನ್ನವರ, ಉಪಾಧ್ಯಕ್ಷ ಸಂತೋಷ ಪಾಟೀಲ, ಸುಭಾಷಗೌಡ ಪಾಟೀಲ, ಹರ್ಷವರ್ಧನ ಪಾಟೀಲ, ಕುಮಾರ ಅಪರಾಜ ಇತರರಿದ್ದರು. ಪ್ರಕಾಶ ಕೊರ್ಬು ನಿರೂಪಿಸಿದರು. ಸುದರ್ಶನ ಜಂತೆನ್ನವರ ಸ್ವಾಗತಿಸಿದರು. ಸಂಜು ಭಿರಡಿ ವಂದಿಸಿದರು.