ಬೈಲಹೊಂಗಲ ನಗರದ ಕೆಎಲ್‌ಇ ಸಂಸ್ಥೆಯ ಪಾಲಿಟೆಕ್ನಿಕ್ (ಡಿಪ್ಲೊಮಾ) ಮತ್ತು ಐಟಿಐ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭವನ್ನುಸಂಸ್ಥೆ ನಿರ್ದೇಶಕ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿದರು. ವಿಜಯಾನಂದ ಸ್ವಾಮೀಜಿ, ಡಾ.ಭಾನುಪ್ರಕಾಶ, ಬಸವರಾಜ ತಟವಾಟಿ ಇತರರಿದ್ದರು. 
ಬೆಳಗಾವಿ

ಉದ್ಯೋಗಕ್ಕಾಗಿ ಅಗತ್ಯ ಕೌಶಲ ರೂಢಿಸಿಕೊಳ್ಳಲಿ

ಬೈಲಹೊಂಗಲ:
ನಗರದ ಕೆಎಲ್‌ಇ ಸಂಸ್ಥೆಯ ಪಾಲಿಟೆಕ್ನಿಕ್ (ಡಿಪ್ಲೊಮಾ) ಮತ್ತು ಐಟಿಐ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ಫರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನ, ಸಂವಹನ ಹಾಗೂ ಪ್ರಾಯೋಗಿಕ ಅನುಭವ ಪಡೆದುಕೊಳ್ಳಬೇಕು. ಕೆಎಲ್‌ಇ ಸಂಸ್ಥೆ ಗುಣಮಟ್ಟದ ಶಿಕ್ಷಣದ ಜತೆಗೆ ಉದ್ಯೋಗಾವಕಾಶ ಒದಗಿಸುವುದರಲ್ಲಿಯೂ ಮುಂಚೂಣಿಯಲ್ಲಿದೆ. ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೇವಿನಕೊಪ್ಪ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಮಾತನಾಡಿ, ದೇಶ-ವಿದೇಶಗಳಲ್ಲಿಯೂ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಸರಾದ ಕೆಎಲ್‌ಇ ಶಿಕ್ಷಣ ಸಂಸ್ಥೆ ಬೈಲಹೊಂಗಲದಲ್ಲಿ ತಾಂತ್ರಿಕ ಶಿಕ್ಷಣ ನೀಡುತ್ತಿರುವುದು ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದರು.
ತಾಪಂ ಇಒ ಸಂಜೀವ ಜುನ್ನೂರ, ಗಣಾಚಾರಿ ಎಕ್ಸಲೆಂಟ್ ಎಜುಕೇಷನ್ ಶಿಕ್ಷಣ ಸಂಸ್ಥೆ ಚೇರ್ಮನ್ ಬಿ.ಬಿ.ಗಣಾಚಾರಿ ಮಾತನಾಡಿ, ಬೈಲಹೊಂಗಲ ನಗರದಲ್ಲಿ ಡಿಪ್ಲೊಮಾ ಕಾಲೇಜನ್ನು ಆಧುನಿಕ ಯಂತ್ರೋಪಕರಣ ಹಾಗೂ ಸುಸಜ್ಜಿತ ಕಟ್ಟಡದೊಂದಿಗೆ ಪ್ರಾರಂಭಿಸಿದ್ದು ಎಲ್ಲರಿಗೂ ಅನೂಕೂಲವಾಗಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಶ್ರೀಧರ ನಿರಡಿ ವಾರ್ಷಿಕ ವರದಿ ಮಂಡಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕೆಎಲ್‌ಇ ಸಂಸ್ಥೆ ಉಪಾಧ್ಯಕ್ಷ ಬಸವರಾಜ ತಟವಾಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್.ಶರಣಪ್ಪನವರ, ಎಸ್.ಎಂ.ಕಳಸಣ್ಣವರ, ಐ.ಎನ್.ಹಾದಿಮನಿ, ಎಸ್.ಆರ್.ಪಾಟೀಲ, ಆರ್.ಎನ್.ವಾರಿ, ಎಸ್.ಎಸ್.ಬಿಳ್ಳೂರ, ವಿ.ಬಿ.ಮೂಗಿ, ವಿ.ಎಸ್.ಸೋಮಣ್ಣವರ, ಎಂ.ಎ.ಸವದತ್ತಿಮಠ, ರವಿ ದೊಡ್ಡಹುಬ್ಬಳ್ಳಿ, ವಿನಾಯಕ ಸಿದ್ನಾಳ ಇತರರಿದ್ದರು. ಕೀರ್ತಿ ಕಟ್ಟಿ ನಿರೂಪಿಸಿದರು. ವೀಣಾ ಪಾಟೀಲ ವಂದಿಸಿದರು.