ಅರಟಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಪ್ರಯೋಗ ಕಾರ್ಯಕ್ರಮಕ್ಕೆ ಶಿವಪ್ಪ ಹಟ್ಟಿ ಚಾಲನೆ ನೀಡಿದರು. ಪಿ.ಎಸ್.ಮಸಳಿ, ಶರಣಯ್ಯ ಹಿರೇಮಠ, ಎನ್.ಎಂ.ಕೆರೂರ ಇತರರಿದ್ದರು. 
ಬೆಳಗಾವಿ

ಶಿಸ್ತು ರೂಢಿಸಿಕೊಳ್ಳಲಿ

ಪ್ರಶಾಂತ ಹೂಗಾರ
ಅರಟಾಳ: ಪಾಲಕರು ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಒಳ್ಳೆಯ ಸಂಸ್ಕಾರ ನೀಡಬೇಕು ಎಂದು ತಾಪಂ ಮಾಜಿ ಸದಸ್ಯ ಶಿವಪ್ಪ ಹಟ್ಟಿ ಹೇಳಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯೆ ಬದುಕಿಗೆ ಬಹಳ ಮುಖ್ಯ. ವಿದ್ಯಾರ್ಥಿಗಳು ಪಾಠದ ಜತೆಗೆ ಶಿಸ್ತು, ಪ್ರಾಮಾಣಿಕತೆ, ಸಂಸ್ಕೃತಿ ಮರೆಯಬಾರದು ಎಂದರು.
ಮುಖ್ಯಶಿಕ್ಷಕ ಪಿ.ಎಸ್.ಮಸಳಿ, ಶರಣಯ್ಯ ಹಿರೇಮಠ, ಎನ್.ಎಂ.ಕೆರೂರ, ಎಸ್.ಕೆ.ಇಂಗಳಗಿ, ಸುರೇಶ ರಜಪೂತ, ವಿಠ್ಠಲ ಹಟ್ಟಿ, ಪಾರ್ವತಿ ಚೌಹಾಣ, ಸುನೀತಾ ಪಡಸಲಗಿ ಇತರರಿದ್ದರು.