ಚಿಕ್ಕೋಡಿ ಸಿಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಗೆ ಗಣ್ಯರು ಚಾಲನೆ ನೀಡಿದರು. ಡಾ.ಸುರೇಶ ಉಕ್ಕಲಿ, ಶ್ರೀಪಾದ ಕುಂಬಾರ, ಭರತ ಕಲಾಚಂದ್ರ, ಮಾರುತಿ ಕೊಣ್ಣೂರಿ, ಲತಾ ಹಿರೇಮಠ, ಮಹಾದೇವ ಮುಂಜಿ ಇತರರಿದ್ದರು. 
ಬೆಳಗಾವಿ

ಸೃಜನಶೀಲ ಕವಿತೆ ಒಡಮೂಡಲಿ

ಪ್ರಶಾಂತ ಹೂಗಾರ
ಚಿಕ್ಕೋಡಿ: ಕವಿಯ ಹೃದಯದಿಂದ ಹೊರಹೊಮ್ಮುವ ಕವಿತೆ ಜನರ ಮನ ತಟ್ಟುತ್ತದೆ ಎಂದು ಚಿಕ್ಕೋಡಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ.ಸುರೇಶ ಉಕ್ಕಲಿ ಹೇಳಿದರು.
ಇಲ್ಲಿನ ಸಿಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ರಾಜ್ಯೋತ್ಸವ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಕವಿಗೋಷ್ಠಿಗೆ ಚಾಲನೆ ನೀಡಿ, ಉದಯೋನ್ಮುಖ ಕವಿಗಳು ಸೃಜನಶೀಲ ಕವಿತೆ ಬರೆಯಲು ರೂಢಿಸಿಕೊಳ್ಳಬೇಕು ಎಂದರು.
ಹಿರಿಯ ಸಾಹಿತಿ ಶ್ರೀಪಾದ ಕುಂಬಾರ ಮಾತನಾಡಿ, ನಾಡಿನ ಗತವೈಭವ ಅನಾವರಣಗೊಳಿಸಲು ಕವಿತೆ ಬರೆದು ಸುಂದರ ನಾಡಿನ ಹಿರಿಮೆ ಹೆಚ್ಚಿಸಬೇಕು. ಆ ನಿಟ್ಟಿನಲ್ಲಿ ಯುವಜನರು ಕಥೆ, ಕವನ ಬರೆಯುವುದನ್ನು ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು ಎಂದರು.
ಹನುಮಂತ ನಾಯಿಕ, ಆರ್.ಎಸ್.ಜೋಡಟ್ಟಿ, ರಾಜು ನಾಯಿಕ, ಮಾರುತಿ ಕೊಣ್ಣೂರಿ, ಮೀನಾಕ್ಷಿ ದಾವಣೆ, ಲತಾ ಹಿರೇಮಠ, ಭರತ ಕಲಾಚಂದ್ರ, ಮಹಾದೇವ ಮುಂಜಿ ಕವನ ವಾಚನ ಮಾಡಿದರು. ದತ್ತಗುರು ಹೆಗಡೆ ಕವಿಗಳಿಗೆ ಪ್ರಮಾಣಪತ್ರ ಸ್ಮರಣಿಕೆ ನೀಡಿ ಗೌರವಿಸಿದರು. ಸವಿತಾ ಟೋಂಬರೆ ನಿರೂಪಿಸಿದರು. ಸುಪ್ರಿಯಾ ಕಲಾಚಂದ್ರ ಸ್ವಾಗತಿಸಿದರು. ನಾಗರಾಜ ಎಂ. ವಂದಿಸಿದರು.