ಬಾಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಶಹಾಜಾನ್ ಡೊಂಗರಗಾಂವ, ಸಿದ್ಧಲಿಂಗ ಸಾಧು ಮಹಾರಾಜ, ವೀರೇಶ ದೇವರು ಇತರರಿದ್ದರು.
- ರಾಜ್ಯೋತ್ಸವ ಪುರಸ್ಕೃತ ಅಶೋಕ ಹಂಚಲಿ ಸಲಹೆ
- ಗುರುವಂದನಾ ಕಾರ್ಯಕ್ರಮ
ಅರಟಾಳ: ಸಂಸ್ಕಾರ ಪಡೆದುಕೊಂಡ ಮಕ್ಕಳು ಗುರಿ ಸಾಧಿಸುವುದರ ಜತೆಗೆ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗುತ್ತಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ ಹಂಚಲಿ ಹೇಳಿದರು.
ಸಮೀಪದ ಬಾಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಕಲಿತವರು ವಿದ್ಯೆ ಜತೆಗೆ ಒಳ್ಳೆಯ ಸಂಸ್ಕಾರ ರೂಢಿಸಿಕೊಂಡಿರುತ್ತಾರೆ. ಉನ್ನತ ಹುದ್ದೆ ಅಲಂಕರಿಸಿ ತಂದೆ-ತಾಯಿ ಆಸೆ ಈಡೇರಿಸಿದ್ದಾರೆ. ಎಲ್ಲರೂ ಸರ್ಕಾರಿ ಶಾಲೆ ಬೆಳೆಸಬೇಕು ಎಂದರು.
ಮಾಜಿ ಶಾಸಕ ಶಹಜಾನ್ ಡೊಂಗರಗಾಂವ ಮಾತನಾಡಿ, ಬಾಡಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕಲಿತ ಶಾಲೆಯ ಶತಮಾನೋತ್ಸವ ಆಚರಣೆಗೆ ಕೈ ಜೋಡಿಸಿರುವುದು ಪುಣ್ಯದ ಮಾರ್ಗವಾಗಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಧನ್ವಂತರಿ ಸಿದ್ಧಿ ಪುರುಷ ಸಿದ್ಧಲಿಂಗ ಸಾಧು ಮಹಾರಾಜರು, ತೆಲಸಂಗ ಹಿರೇಮಠದ ವೀರೇಶ ದೇವರು, ಸಂಗಯ್ಯ ಹಿರೇಮಠ ಸ್ವಾಮೀಜಿ ಮಾತನಾಡಿದರು.
ಶರಣಯ್ಯ ಭಂಡಾರಿಮಠ, ಶಾಮರಾವ ಪೂಜಾರಿ, ಸಂಗನಗೌಡ ಪಾಟೀಲ, ಎಸ್.ಟಿ.ಬೆಳಂಕಿ, ಗೋಪಾಲ ಕಾಗವಾಡ, ಸದಯ್ಯ ಹೊನವಾಡಮಠ, ಚಿದಾನಂದ ಬಿರಾದಾರ, ಹನುಮಂತ ಪಡಸಲಗಿ, ರೇವಪ್ಪ ತೇಲಿ, ರಾವಸಾಬ ಬಿರಾದಾರ, ಬಸಪ್ಪ ಬನಹಟ್ಟಿ, ಸಿದ್ದು ದಳವಾಯಿ, ಎಂ.ಎಸ್.ಸಕ್ರಿ, ಎ.ಬಿ.ಪರುಶೆಟ್ಟಿ, ಎಸ್.ಎಸ್.ಹೂಗಾರ, ಎ.ಎಸ್.ಪೂಜಾರಿ, ಎಸ್.ಎಂ.ಕುಂಬಾರ, ಎಂ.ಡಿ.ಚಮಕೇರಿ, ಬಿ.ಕೆ.ಮುಧೋಳ ಇತರರಿದ್ದರು.