ರಾಯಬಾಗ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಹಾದೇವ ಸನಮುರಿ, ಎಂ.ಎಂ.ಡಪ್ಪಿನ, ವಿನೋದ ಮಾವರಕರ, ಡಾ.ಎಸ್.ಎಂ.ಪಾಟೀಲ, ಆರ್.ಬಿ.ಮನುವಡ್ಡರ ಇತರರಿದ್ದರು. 
ಬೆಳಗಾವಿ

ಗಣರಾಜ್ಯೋತ್ಸವ ಅದ್ದೂರಿ ಆಚರಿಸಲಿ

ರಾಯಬಾಗ: ಗಣರಾಜ್ಯೋತ್ಸವ ದಿನವನ್ನು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಮಹಾದೇವ ಸನಮುರಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ 77ನೇ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜ.26ರಂದು ಬೆಳಗ್ಗೆ ತಾಲೂಕುಮಟ್ಟದ ಎಲ್ಲ ಕಚೇರಿಗಳಲ್ಲಿ ಧ್ವಜಾರೋಹಣದ ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಾಲೂಕು ಅನುಷ್ಠಾನಾಧಿಕಾರಿಗಳು ಕಡ್ಡಾಯ ಹಾಜರಿರಬೇಕು ಎಂದರು.
ಶಿವಯೋಗಿ ಸಿದ್ಧರಾಮ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ, ಸವಿತಾ ಮಹರ್ಷಿ ಮತ್ತು ಮಡಿವಾಳ ಮಾಚಯ್ಯ ಜಯಂತಿಯನ್ನು ತಾಲೂಕು ಆಡಳಿತದಿಂದ ಆಚರಿಸಲು ನಿರ್ಧರಿಸಲಾಯಿತು.
ಸಿಪಿಐ ಎಂ.ಎಂ.ಡಪ್ಪಿನ, ಕೃಷಿ ಅಧಿಕಾರಿ ವಿನೋದ ಮಾವರಕರ, ಡಾ.ಎಸ್.ಎಂ.ಪಾಟೀಲ, ಆರ್.ಬಿ.ಮನುವಡ್ಡರ, ಸುಭಾಷ ಭಜಂತ್ರಿ, ಎಂ.ಆರ್. ಯಡನಟ್ಟಿ, ಎಚ್.ಎಲ್.ಪೂಜಾರಿ, ವೈ.ಎಸ್.ಸನಮನಿ, ಭಾರತಿ ಕಾಂಬಳೆ, ಚೈತ್ರಾಂಜಲಿ ಭೊಸಲೆ, ವಿಶ್ವನಾಥ ಹಾರೂಗೇರಿ, ಡಾ.ಸಚಿವ ಸೌಂದಲಗಿ, ವಿನಾಯಕ ಭಾಟೆ, ಎಸ್.ಬಿ.ಕದಂ, ಅನಿಲ ಶೆಟ್ಟಿ, ದೀಲಿಪ ಪಾಯನ್ನವರ, ರಾಕೇಶ ಅವಳೆ, ಗಜಾನನ ಮಾಳಿ, ಉತ್ತಮ ಕಾಂಬಳೆ, ರ್ಇಾನ್ ತಾಂಬೋಳೆ, ಅನಿಲ ಕೋರವಿ ಇತರರಿದ್ದರು.