ಬೋರಗಾಂವದ ನೂತನ ಪಟ್ಟಣ ಪಂಚಾಯಿತಿ ಎದುರು ಡಾ.ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿ ನಿರ್ಮಿಸಲು ಸ್ಥಳಾವಕಾಶ ನೀಡುವಂತೆ ಅಧ್ಯಕ್ಷ ಪಿಂಟು ಕಾಂಬಳೆ ಹಾಗೂ ಮುಖ್ಯ ಅಧಿಕಾರಿ ಎಸ್.ಬಿ.ತೊಡಕರಗೆ ಮನವಿ ಸಲ್ಲಿಸಲಾಯಿತು. ವಿಜಯಕುಮಾರ ಶಿಂಗೆ, ಅಭಯಕುಮಾರ ಮಗದುಮ, ಸಂಗೀತಾ ಶಿಂಗೆ, ಅಮರ ಶಿಂಗೆ ಇತರರಿದ್ದರು. 
ಬೆಳಗಾವಿ

ಪಪಂ ಎದುರು ಅಂಬೇಡ್ಕರ್ ಪುತ್ಥಳಿ ನಿರ್ಮಿಸಲಿ

ಬೋರಗಾಂವ: ಐದು ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗುವ ಪಟ್ಟಣ ಪಂಚಾಯಿತಿ ಹೊಸ ಕಟ್ಟಡ ಎದುರು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿ ನಿರ್ಮಿಸಬೇಕೆಂದು ಆಗ್ರಹಿಸಿ ಸೋಮವಾರ ಹಿಂದುಳಿದ ಸಮುದಾಯದ ಮುಖಂಡರು ಪಂಚಾಯಿತಿ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಪಂ ಮಾಜಿ ಸದಸ್ಯ ವಿಜಯಕುಮಾರ ಶಿಂಗೆ ಮಾತನಾಡಿ, ನಿಪ್ಪಾಣಿ ತಾಲೂಕಿನಲ್ಲಿ ಬೋರಗಾಂವ ಅತಿ ದೊಡ್ಡ ಪಟ್ಟಣವಾಗಿದ್ದು, ಅತಿ ಹೆಚ್ಚು ಹಿಂದುಳಿದ ಸಮುದಾಯದವರನ್ನು ಹೊಂದಿದೆ. ಎಲ್ಲ ನಾಗರಿಕರಿಗೆ ಅಂಬೇಡ್ಕರ್ ಸಂವಿಧಾನದ ಮೂಲಕ ಹಕ್ಕು ನೀಡಿದ್ದು, ಪಂಚಾಯಿತಿ ಎದುರು ಅವರ ಪುತ್ಥಳಿ ನಿರ್ಮಿಸಲು ಸ್ಥಳಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತರಾದ ಪಂಡಿತ ಹಿರೇಮಣಿ ಮತ್ತು ತುಷಾರ ಕಾಂಬಳೆ ಮಾತನಾಡಿ, ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಡಾ. ಅಂಬೇಡ್ಕರ್ ಪುತ್ಥಳಿ ಇದ್ದು, ಬೋರಗಾಂವ ಪಟ್ಟಣದಲ್ಲಿಲ್ಲ. ಹೀಗಾಗಿ ಸಮುದಾಯದ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪಂಚಾಯಿತಿ ಮುಖ್ಯ ಅಧಿಕಾರಿ ಎಸ್.ಬಿ.ತೊಡಕರ ಮನವಿ ಸ್ವೀಕರಿಸಿ, ಮುಂಬರುವ ಮಾಸಿಕ ಸಭೆಯಲ್ಲಿ ಠರಾವು ಬರೆದು ಹಿರಿಯ ಅಧಿಕಾರಿಗಳಿಗೆ ತಿಳಿಸುವುದಾಗಿ ಭರವಸೆ ನೀಡಿದರು. ಪಪಂ ಅಧ್ಯಕ್ಷ ಪಿಂಟು ಕಾಂಬಳೆ, ಸದಸ್ಯ ಅಭಯಕುಮಾರ ಮಗದುಮ, ಸಂಗೀತಾ ಶಿಂಗೆ, ಮುಖಂಡರಾದ ಅಮರ ಶಿಂಗೆ, ಪಂಡಿತ ಹಿರೇಮನಿ, ಶಿವಾಜಿ ಭೋರೆ, ಅಜಿತ ಕಾಂಬಳೆ, ಮಂಗಲ ಮಾಳಕರಿ, ರಾಜು ಶಿಂಗೆ, ಕಿರಣ ಶಿಂಗೆ, ಬಬಲು ಮಧಾಳೆ, ಅಶ್ವಿನ ಮಾನ್ವಿ, ಸರ್ಜೇರಾವ ಧನವಾಡೆ, ಪಿಂಟು ಮಧಾಳೆ, ಅನಿಲ ಕೊರವಿ, ಸುಕುಮಾರ ಹಿರೇಮನಿ, ದಿನೇಶ ಕಾಂಬಳೆ, ಬಾಳು ಮಹಾಜನ, ಅಣ್ಣಾಸಾಹೇಬ ಹಿರೇಮನಿ ಇತರರಿದ್ದರು.