ಗುರ್ಲಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ವಿ.ಬಿ ಮುಗಳಖೋಡ ಮಾತನಾಡಿದರು. ಬಿ.ಜಿ.ಗಡಾಡ, ಎ.ಬಿ.ಹೊಸಕೋಟೆ ಇತರರಿದ್ದರು. 
ಬೆಳಗಾವಿ

ಆರೋಗ್ಯಯುತ ಸಮಾಜ ನಿರ್ಮಿಸೋಣ

ಗುರ್ಲಾಪುರ: ಪರಿಸರ ರಣೆ ಪ್ರತಿಯೊಬ್ಬರ ಹೊಣೆ. ನಮ್ಮ ಸುತ್ತಲಿನ ಪರಿಸರ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡೋಣ ಎಂದು ಪುರಸಭೆ ಸದಸ್ಯ ವಿ.ಬಿ.ಮುಗಳಖೋಡ ಹೇಳಿದರು.
ಗ್ರಾಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ದೈಹಿಕ ಶಿಣ ಮಹಾವಿದ್ಯಾಲಯ ಮೂಡಲಗಿ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಚ್ಛ ಭಾರತ ಅಭಿಯಾನ, ವನ ಮಹೋತ್ಸವ, ಚುನಾವಣೆ ಜಾಗೃತಿ ಅಭಿಯಾನ, ಕಾನೂನು ಅರಿವು ನೆರವು, ಗ್ರಾಮ ಸಮೀೆ, ನನ್ನ ಮಣ್ಣು ನನ್ನ ದೇಶ, ಮಾದಕ ವ್ಯಸನಗಳ ನಿಮೂರ್ಲನೆ, ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಸೇರಿ ಇತ್ಯಾದಿ ವಿಷಯಗಳ ಕುರಿತು ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಬಿ.ಜಿ.ಗಡಾಡ ಉಪನ್ಯಾಸ ನೀಡಿದರು. ಎ.ಬಿ.ಹೊಸಕೋಟೆ, ಎಸ್​.ಎಸ್​.ಸೋನವಾಲ್ಕರ, ಡಾ.ಎಂ.ಕೆ.ಕಂಕಣವಾಡಿ. ಬಿ.ಕೆ.ಬಡಗನವರ, ಬಿ.ಎಸ್​.ಕಂಬಾರ, ಎಸ್​.ಎಂ.ಹಳ್ಳೂರ, ಎಸ್​.ಬಿ.ಮಾಲೋಜಿ, ಎಸ್​.ವೈ.ಒಡ್ಡೊಡಗಿ, ಐ.ಬಿ.ಮಾಲಿ, ಡಾ.ಎಲ್​.ಬಿ.ಮನ್ನಾಪುರೆ ಇತರರಿದ್ದರು.