ಸುಟ್ಟಟ್ಟಿ ಗ್ರಾಮದಲ್ಲಿ ಕರಿಸಿದ್ಧೇಶ್ವರ ಭಂಡಾರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಉದ್ಘಾಟಿಸಿದರು. ಸಿದ್ದಪ್ಪ ಮುದಕಣ್ಣವರ, ಸದಾಶಿವ ಬುಟಾಳಿ, ಅಪ್ಪಾಸಾಬ ಅವತಾಡೆ, ಅಣ್ಣಾಸಾಬ ಚವ್ಹಾಣ ಇತರರಿದ್ದರು.
ಅಥಣಿ ಗ್ರಾಮೀಣ: ಕಾಯಕ, ಭಕ್ತಿ, ಶ್ರದ್ಧೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡವರು ಬದುಕಿನಲ್ಲಿ ಬರುವ ಕಷ್ಟ, ತೊಂದರೆಗಳಿಗೂ ವಿಚಲಿತನಾಗುವುದಿಲ್ಲ ಎಂದು ಕೌಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.
ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಸೋಮವಾರ ಕರಿಸಿದ್ಧೇಶ್ವರ ಭಂಡಾರ ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಮಾತನಾಡಿ, ಎಲ್ಲರೂ ನೆಮ್ಮದಿಯಿಂದ ಕೂಡಿ ಬಾಳುವುದೇ ಸ್ವರ್ಗ ಸುಖವಾಗಿದೆ. ಅದಕ್ಕಾಗಿ ದ್ವೇಷ, ವೈಮನಸ್ಸು ಮಾಡಿಕೊಳ್ಳಬಾರದು. ಕರಿಸಿದ್ಧೇಶ್ವರ ದೈವಿ ಪುರುಷರು ಹೇಗೆ ಇರಬೇಕೆಂದು ಮಾರ್ಗದರ್ಶನ ಮಾಡಿದ್ದಾರೆ. ಹಾಲುಮತ ಸಮುದಾಯದವರು ಕಾಯಕ ಜೀವಿಗಳು ಎಂದರು.
ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿ, ಸುಟ್ಟಟ್ಟಿ ಗ್ರಾಮ ಸಂಸ್ಕೃತಿ ಮತ್ತು ದೈವಿಕ ನಂಬಿಕೆಯ ತಾಣವಾಗಿದೆ ಎಂದರು.
ಉದ್ಯಮಿ ಸದಾಶಿವ ಬುಟಾಳಿ, ಜಿಪಂ ಮಾಜಿ ಸದಸ್ಯ ಅಪ್ಪಾಸಾಬ ಅವತಾಡೆ ಮಾತನಾಡಿದರು. ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಚವ್ಹಾಣ, ಮುತ್ತಪ್ಪ ಹಿಡಕಲ್ಲ, ರಾವಸಾಬ ಸಂಕೋನಟ್ಟಿ, ಶಿವಪ್ಪ ಅಜ್ಜಣಗಿ, ಸದಾಶಿವ ಯಂಗಾರೆ, ಲಕ್ಷ್ಮಣ ಅಜ್ಜಣಗಿ, ಶಿವಪ್ಪ ಪೂಜಾರಿ, ವಸಂತ ಚವ್ಹಾಣ, ಡಾ.ಭೀಮಪ್ಪ ಅಜ್ಜಣಗಿ, ಮುದಕ ಕರಜಗಿ, ಮಾಯಪ್ಪ ಸನದಿ, ಶಂಕರ ಸವದಿ ಇತರರಿದ್ದರು.