ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಬೃಹತ್​ ಕೃಷಿಮೇಳ ಮತ್ತು ಭಾರೀ ಜಾನುವಾರು ಜಾತ್ರೆ ಕೃಷಿ ವಿಚಾರಸಂಕಿರಣದಲ್ಲಿ ಸೋಮನಗೌಡ್ರು ಮಾತನಾಡಿದರು. ಡಾ.ಗುರುರಾಜ ಕೌಜಲಗಿ, ವಿಶ್ವನಾಥ ಇತರರಿದ್ದರು. 
ಬೆಳಗಾವಿ

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಲಿ

ಸೋಮಲಿಂಗ ತಳವಾರ
ಬೈಲಹೊಂಗಲ: ರೈತರು ಕೃಷಿ ೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸಾಧನೆ ಮಾಡುವುದರ ಜತೆ ಆರ್ಥಿಕವಾಗಿ ಸಬಲರಾಗಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸೋಯಾ ಅವರೆ ವಿಭಾಗದ ಪ್ರಾಧ್ಯಾಪಕ ಸೋಮನಗೌಡ್ರು ಹೇಳಿದರು.
ನಗರದ ಎಪಿಎಂಸಿ ಪ್ರಾಂಗಣದಲ್ಲಿ ಈಶಪ್ರಭು ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಕೃಷಿಕ ಸಮಾಜ, ಕೃಷಿಕ ಪರಿಕರ ಮಾರಾಟಗಾರರ ಸಂ, ಗ್ರಾಮೀಣ ಜಾಗೃತ ನಾಗರಿಕ ವೇದಿಕೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂ, ಕೆಎಲ್​ಇ ಸಂಸ್ಥೆಯ ಕೆವಿಕೆ ಮತ್ತಿಕೊಪ್ಪ, ರೋಟರಿ ಕ್ಲಬ್​ ಆಶ್ರಯದಲ್ಲಿ ಬೃಹತ್​ ಕೃಷಿಮೇಳ ಮತ್ತು ಭಾರಿ ಜಾನುವಾರು ಜಾತ್ರೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ವಿಚಾರಸಂಕಿರಣದಲ್ಲಿ ಮಾತನಾಡಿದರು.
ಕೆಎಲ್​ಇ ಸಂಸ್ಥೆಯ ಮತ್ತಿಕೊಪ್ಪ ಕೆವಿಕೆ ಬೇಸಾಯ ತ ವಿಶ್ವನಾಥ, ಕೃಷಿ ತ ಡಾ.ಗುರುರಾಜ ಕೌಜಲಗಿ ಮತ್ತು ಮುಖಂಡ ಮಹಾಂತೇಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಾನುವಾರು ಜಾತ್ರೆ ಅಧ್ಯ ಮಡಿವಾಳಪ್ಪ ಹೋಟಿ, ವಿರೂಪಾ ಕೋರಿಮಠ, ಮಹಾಂತೇಶ ಶೀಲವಂತರ, ಮಹಾಂತೇಶ ಮತ್ತಿಕೊಪ್ಪ, ವಿ.ಕೆ.ಬಡಿಗೇರ, ಉಳವಪ್ಪ ಉಪ್ಪಿನ, ವಿಠ್ಠಲ ದಾಸೋಗ, ಮುರಗೇಶ ಗುಂಡ್ಲೂರ, ಬಾಬುಸಾಬ ಸುತಗಟ್ಟಿ, ಅಶೋಕ ಮತ್ತಿಕೊಪ್ಪ ಇತರರಿದ್ದರು. ಬಸವರಾಜ ಭರಮಣ್ಣವರ ನಿರೂಪಿಸಿದರು.