ಬೆಳಗಾವಿ ಎಸ್‌ಬಿಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳೊಂದಿಗೆ ಡಾ.ಅಲ್ಲಮಪ್ರಭು ಗುಡ್ಡ, ಎಸ್.ಬಿ.ಘಾಟಗೆ, ಅಮಿತ ಘಾಟಗೆ, ಡಾ.ಮಾನಸಿ ಘಾಟಗೆ ಇತರರಿದ್ದರು.
ಬೆಳಗಾವಿ:
ನಗರದ ಡಿಬಿಎಇಟಿ ಸಂಸ್ಥೆಯ ಎಸ್‌ಬಿಜಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಕಲಿಕೆಗೆ ಕೊನೆಯಿಲ್ಲ. ಹೀಗಾಗಿ, ಪದವಿ ಮುಗಿಸಿದರೂ ಅಧ್ಯಯನ ಬಿಡಬಾರದು ಎಂದರು.
ಪದವೀಧರರ ಪ್ರಮಾಣವಚನ ಸ್ವೀಕಾರ, ಶೈಕ್ಷಣಿಕ ಮೆರವಣಿಗೆ, ಪದವಿ ಹಾಗೂ ಪದಕಗಳ ವಿತರಣೆಯು ನೆರವೇರಿತು.
ಎಸ್‌ಬಿಜಿ ಸಮೂಹದ ಅಧ್ಯಕ್ಷ, ಮಾಜಿ ಶಾಸಕ ಎಸ್.ಬಿ.ಘಾಟಗೆ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ವಿಶ್ವವಿದ್ಯಾಲಯದ ಐಎಂಸಿಎಸ್‌ಆರ್ ನಿರ್ದೇಶಕ ಡಾ.ಬಿ.ಎಸ್.ಪ್ರಸಾದ, ಹುಬ್ಬಳ್ಳಿಯ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ ಬಣ್ಣಿಗೋಳ, ಅಂಕಲಿಯ ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎನ್.ಎ.ಮಗದುಮ್ಮ, ಆಸ್ಪತ್ರೆಯ ಅಧ್ಯಕ್ಷ ಅಮಿತ ಘಾಟಗೆ, ವ್ಯವಸ್ಥಾಪಕ ನಿರ್ದೇಶಕಿ ಡಾ.ಮಾನಸಿ ಘಾಟಗೆ, ವೈದ್ಯಕೀಯ ನಿರ್ದೇಶಕ ಡಾ. ಆದಿವೇಶ ಅರಕೇರಿ ಇತರರಿದ್ದರು.