ಸವದತ್ತಿ ನಗರದಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಉಚಿತ ತಪಾಸಣೆ ಶಿಬಿರ ಜರುಗಿತು. ಮಲ್ಲಿಕಾರ್ಜುನ ಹೆಗ್ಗನ್ನವರ, ಸಂಗನಬಸಯ್ಯ ಗಡಗಿಮಠ, ಜಗದೀಶ ಹಂಪನ್ನವರ, ನಾರಾಯಣ ಧನ್ಯಾಳ ಇತರರಿದ್ದರು.
ನಗರದ ಕರೀಕಟ್ಟಿ ರಸ್ತೆಯ ಚೋಪ್ರಾ ಕಾಲೇಜು ಬಸ್ ನಿಲ್ದಾಣದ ಬಳಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಮಧುಮೇಹ ಮತ್ತು ರಕ್ತದೊತ್ತಡ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಸಮಾಜದಲ್ಲಿನ ಅಸಹಾಯಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜೈಂಟ್ಸ್ ಗ್ರೂಪ್ ಆರೋಗ್ಯ ತಪಾಸಣೆ ಆಯೋಜಿಸಿರುವ ಕಾರ್ಯ ಶ್ಲಾಘನೀಯ ಎಂದರು.
ಡಾ.ಶ್ರೀಪಾದ ಸಬನೀಸ್ ನೇತೃತ್ವದ ತಂಡ ತಪಾಸಣೆ ನಡೆಸಿತು. 150ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು. ಜೈಂಟ್ಸ್ ಗ್ರೂಪ್ ಅಧ್ಯಕ್ಷ ನಾರಾಯಣ ಧನ್ಯಾಳ, ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿಮಠ,
ಜಗದೀಶ ಹಂಪನ್ನವರ, ಜಾವೇದ್ ಪಟಾದ, ಉಮೇಶ ಸರದಾರ, ಶಂಕರ ಇಜಂತಕರ, ಗಿರೀಶ ಮುನ್ನೋಳಿ, ಬಸವರಾಜ ಪುಟ್ಟಿ, ಬಸವರಾಜ ಆಯಟ್ಟಿ, ಮಲ್ಲನಗೌಡ ದ್ಯಾಮನಗೌಡ್ರ, ಎಂ.ಎಂ. ಯಲಿಗಾರ, ಉಲ್ಲಾಸ ದೊಡ್ಡಮನಿ, ರಾಜಶೇಖರ ಕೌಜಲಗಿ, ಮಯೂರ ಕಾರದಗಿ ಇತರರಿದ್ದರು.