ಐಗಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಎ.ಬಿ.ಗುಳೇದಾರ ಉದ್ಘಾಟಿಸಿದರು. ರಾಹುಲ ಚವ್ಹಾಣ, ಸಿ.ಎಸ್. ನೇಮಗೌಡ, ಡಾ.ಪೂರ್ಣಿಮಾ ಅಂಕಲಗಿ, ಶಿವಾನಂದ ಸಿಂಧೂರ, ಕವಿತಾ ಹಿರೇಮಠ ಇತರರಿದ್ದರು.
ಐಗಳಿ: ರಾಜ್ಯದಲ್ಲಿ ನಿತ್ಯ 800 ರಿಂದ 1,000 ಯೂನಿಟ್ ರಕ್ತದ ಬೇಡಿಕೆಯಿದ್ದು, ಶೇ.80ರಷ್ಟು ರಕ್ತ ಪೂರೈಕೆಯಾಗುತ್ತಿದ್ದು, ಯುವಜನರು ಬೇಡಿಕೆ ಗಮನದಲ್ಲಿಟ್ಟುಕೊಂಡು ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಎ.ಬಿ.ಗುಳೇದಾರ ಹೇಳಿದರು.
ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಒಬ್ಬರು ವರ್ಷದಲ್ಲಿ 2 ಬಾರಿ ರಕ್ತದಾನ ಮಾಡಿದರೆ ಆರೋಗ್ಯದಿಂದಿರಲು ಸಾಧ್ಯ. ರಕ್ತ ಭಂಡಾರ ಹಲವಾರು ಜೀವಗಳ ರಕ್ಷಣಾ ಕೇಂದ್ರವಾಗಿದೆ. ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜೀವ ಉಳಿಸಲು ಸಾಧ್ಯ ಎಂದರು.
ಮುಖಂಡರಾದ ಸಿ.ಎಸ್.ನೇಮಗೌಡ, ಶಿವಾನಂದ ಸಿಂಧೂರ, ಗ್ರಾಪಂ ಸದಸ್ಯ ಬಿ.ಎಸ್.ಬಿರಾದಾರ, ಅಪ್ಪಾಸಾಬ ಪಾಟೀಲ, ಪಿಡಿಒ ರಾಜೇಂದ್ರ ಪಾಠಕ ರಕ್ತದಾನ ಕುರಿತು ಸಲಹೆ ನೀಡಿದರು. ಸುಮಾರು 45 ಯುವಕರು ರಕ್ತ ದಾನ ಮಾಡಿದರು.
ವೈದ್ಯಾಧಿಕಾರಿ ಡಾ.ರಾಹುಲ ಚವ್ಹಾಣ, ಬೈರಪ್ಪ ಬಿಜ್ಜರಗಿ, ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಪ್ರಲ್ಹಾದ್ ಪಾಟೀಲ, ಜಗದೀಶ ತೆಲಸಂಗ, ಶ್ರೀಶೈಲ ಮಿರ್ಜಿ, ಜಗದೀಶ ಕೊರಬು, ಮಲಗೌಡ ಪಾಟೀಲ, ಡಾ.ಪೂರ್ಣಿಮಾ ಅಂಕಲಗಿ, ನೇತ್ರಾಧಿಕಾರಿ ಪ್ರಕಾಶ ಪರಣಾಕರ, ಮುತ್ತಪ್ಪ ಕಾಂಬಳೆ, ಸಂಗಮೇಶ ಮನಗೂಳಿ, ಶಾಲಿನಿ, ಕವಿತಾ ಹಿರೇಮಠ ಇತರರಿದ್ದರು.