ಮುಗಳಖೋಡ ಪಟ್ಟಣದ ಯಲ್ಲಾಲಿಂಗ ಮಹಾಪ್ರಭುಗಳ ಬೃಹನ್ ಮಠದಲ್ಲಿ ಕುಸ್ತಿ ಪಂದ್ಯಾವಳಿಗೆ ಡಾ.ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಮುತ್ತಪ್ಪ ಬಾಳೋಜಿ, ಪರಪ್ಪಗೌಡ ಖೇತಗೌಡರ, ಹಾಲಪ್ಪ ಶೇಗುಣಶಿ ಇತರರಿದ್ದರು. 
ಬೆಳಗಾವಿ

ಕುಸ್ತಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಲಿ

ಮುಗಳಖೋಡ: ದೇಸಿ ಕ್ರೀಡೆ ಕುಸ್ತಿಯನ್ನು ಉಳಿಸಿ ಬೆಳೆಸಬೇಕು. ಕುಸ್ತಿ ಹಾಗೂ ಕುಸ್ತಿ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪ್ರೋತ್ಸಾಹ ದೊರೆಯಲಿ ಎಂದು ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಯಲ್ಲಾಲಿಂಗ ಮಹಾಪ್ರಭುಗಳ ಬೃಹನ್ ಮಠದಲ್ಲಿ ಸಿದ್ಧಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ಜಂಗೀ ನಿಖಾಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಪುಣೆ, ಕೊಲ್ಲಾಪುರ, ಹರಿಯಾಣ, ನೇಪಾಳ ಸೇರಿದಂತೆ ವಿವಿಧ ದೇಶದ 38ಕ್ಕೂ ಅಧಿಕ ಕುಸ್ತಿ ಪೈಲ್ವಾನರು ಪಾಲ್ಗೊಂಡಿದ್ದರು. ಮುತ್ತಪ್ಪ ಬಾಳೋಜಿ, ಪರಪ್ಪಗೌಡ ಖೇತಗೌಡರ, ಹಾಲಪ್ಪ ಶೇಗುಣಶಿ, ಭೀಮಶಿ ತಳವಾರ, ಹಾಲಪ್ಪ ಮೆಕ್ಕಳಕಿ, ಸಿದ್ಧರಾಮ ಅಳಗೋಡಿ, ವಿಠ್ಠಲ ಕಾಮಾಣಿ, ಮುಖ್ಯಶಿಕ್ಷಕ ಮಾರುತಿ ಕಳ್ಳಿಗುದ್ದಿ, ಶ್ರೀಶೈಲ ಅಂಗಡಿ, ಮಹಾದೇವ ಸಂಗಾನಟ್ಟಿ, ಮಲ್ಲಪ್ಪ ಹೊನ್ನೂರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಪುರಸಭೆ ಸದಸ್ಯರಾದ ರಾಜುಗೌಡ ನಾಯಕ, ಮಹಾಂತೇಶ ಯರಡೆತ್ತಿ, ಗುರು ಮಠಪತಿ, ಅಣ್ಣಪ್ಪಗೌಡ ಪಾಟೀಲ, ಮಹಾದೇವ ಬುಲಬುಲೆ, ಚೇತನ ಯಡವನ್ನವರ, ರಾಯಗೌಡ ಖೇತಗೌಡರ, ಸಿದ್ದರಾಮ ಯರಡೆತ್ತಿ, ಗುತ್ತಿಗೆದಾರ ಲಕ್ಷ್ಮಣ ಗೋಕಾಕ, ಮಾಜಿ ಪೈಲ್ವಾನರಾದ ಮಾರುತಿ ಗೋಕಾಕ, ಸತ್ಯಪ್ಪ ಮಂಟೂರ, ಭೀಮಪ್ಪ ಹಳಿಂಗಳಿ, ಈರಪ್ಪ ಗೋಕಾಕ, ಹನುಮಂತ ಬಾಬಣ್ಣವರ, ರಾವಸಾಹೇಬ ನಾಯಿಕ, ಗಂಗಪ್ಪ ಗೋಕಾಕ,
ರಮೇಶ ಖೇತಗೌಡರ, ಶಿವಾನಂದ ಮೆಕ್ಕಳಕಿ, ಭೀಮಶಿ ಬನಶಂಕರಿ ಇತರರು ಇದ್ದರು.