ವಿಶ್ವ ಯೋಗ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ, ಸಂಜಯ ಕುಸ್ತಿಗಾರ, ಎಸ್.ಕೆ.ಹೊಳೆಪ್ಪನವರ ಇತರರಿದ್ದರು.
ಅಥಣಿ: ನಗರದಲ್ಲಿ ಅದ್ದೂರಿ ಹಾಗೂ ಮಾದರಿಯಾಗಿ ವಿಶ್ವ ಯೋಗ ದಿನ ಆಚರಣೆ ಮಾಡಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ತಾಲೂಕಾಡಳಿತ, ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಯೋಗ ದಿನಾಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಥಣಿಯಲ್ಲಿ ಜೂ.21ರಂದು ವಿಶ್ವ ಯೋಗ ದಿನ ಆಚರಿಸಲಾಗುವುದು. ಅಗತ್ಯ ವೇದಿಕೆ, ಧ್ವನಿವರ್ಧಕ, ಎಲ್‌ಇಡಿ ಸ್ಕ್ರೀನ್ ಅಳವಡಿಕೆ, ಉಪಾಹಾರ ವ್ಯವಸ್ಥೆ ಮಾಡಲಾಗುವುದು ಎಂದರು.
ಯೋಗ ದಿನಾಚರಣೆ ಬಗ್ಗೆ ಯುವಜನತೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳು, ತಾಲೂಕು ಪತ್ರಕರ್ತರ ಸಂಘ, ಕಂದಾಯ, ಪೊಲೀಸ್ ಸೇರಿದಂತೆ ತಾಲೂಕಾಡಳಿತ ಎಲ್ಲ ಇಲಾಖೆಗಳ ಸಹಭಾಗಿತ್ವದಲ್ಲಿ ಸಾರ್ವಜನಿಕರಲ್ಲಿ ಜಾಗೃತಿಗೆ ಒತ್ತು ನೀಡಲಾಗುವುದು. ನಿರ್ವಹಣೆಗೆ ವಿವಿಧ ಸಮಿತಿ ರಚಿಸಲಾಗಿದ್ದು, ಯೋಗ ಸಮಿತಿ ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದ ಕ್ರೀಡಾಂಗಣದ ಆವರಣದಲ್ಲಿ ಜರುಗಲಿದೆ.
ಯೋಗ ಪಟುಗಳಾದ ಎಸ್.ಕೆ.ಹೊಳೆಪ್ಪನವರ, ಎ.ಬಿ.ಪಾಟೀಲ, ಸುರೇಶ ಚಿಕ್ಕಟ್ಟಿ, ಸಂಜಯ ಕುಸ್ತಿಗಾರ, ಶಿವಾನಂದ ಬುರ್ಲಿ, ಮಲ್ಲಿಕಾರ್ಜುನ ಮಗದುಮ್ಮ, ನಾಗೇಂದ್ರ ಭಟ್, ಶಂಕರ ಮಟ್ಟೆಪ್ಪನವರ, ಸುರೇಖಾ ತಾಂಬಟ, ಡಾ.ವಿನಾಯಕ ಚಿಂಚೊಳಿಮಠ, ಶ್ರೀಶೈಲ ಪಾಟೀಲ, ವಿಕಾಸ ತಾಂಬಟ, ಆರ್.ಎಸ್.ದೊಡ್ಡನಿಂಗಪಗೊಳ, ಎಸ್.ಎಸ್.ಗೊರಜನಾಳ, ಆರ್.ಎಂ.ಧರಿಗೌಡ ಇತರರಿದ್ದರು.