ಇಟಗಿಯ ಲಕ್ಷ್ಮೀ ಮಹಿಳಾ ಸಹಕಾರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅಧ್ಯಕ್ಷೆ ಅಂಜನಾ ಹೊನ್ನಿದಿಬ್ಬ ಉದ್ಘಾಟಿಸಿದರು. ವಿಜಯಲಕ್ಷ್ಮೀ ತುರಮರಿ, ಶಾಂತವ್ವ ಮಜಗಾವಿ ಇತರರು ಇದ್ದರು.
ಇಟಗಿ: ಸಮಾಜದಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಮಹಿಳೆಯರು ಸ್ವಾವಲಂಬನೆ ಜೀವನ ಸಾಗಿಸುವ ಮೂಲಕ ಆರ್ಥಿಕ ಸಬಲೀಕರಣ ಹೊಂದಬೇಕು ಎಂದು ಇಟಗಿ ಲಕ್ಷ್ಮೀ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಅಂಜನಾ ಹೊನ್ನಿದಿಬ್ಬ ಹೇಳಿದರು.
ಗ್ರಾಮದ ಸಹಕಾರ ಸಂಘದ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬಂತೆ ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಸ್ಥಾನದಲ್ಲಿ ಇದ್ದಾರೆ ಎಂದರು. ನಿರ್ದೇಶಕರಾದ ವಿಜಯಲಕ್ಷ್ಮೀ ತುರಮರಿ, ಶಾಂತವ್ವ ಮಜಗಾವಿ, ರಾಜೇಶ್ವರಿ ಕಮ್ಮಾರ, ಪ್ರಭಾವತಿ ಕಮ್ಮಾರ, ಭಾಗೀರಥಿ ಕಮ್ಮಾರ, ಪಾರ್ವತಿ ಗೂರನವರ ಹಾಗೂ ನಿವತ್ತ ಶಿಕ್ಷಕ ಎಸ್.ಎಸ್.ಹಿರೇಮಠ ಇತರರು ಇದ್ದರು.
ಪ್ರಿಯಾಂಕಾ ರೇಳೆಕರ ನಿರೂಪಿಸಿದರು. ಐಶ್ವರ್ಯಾ ಯರಗಟ್ಟಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಚಿಕ್ಕಮಠ ವಂದಿಸಿದರು.