ಬೇಡಕಿಹಾಳದಲ್ಲಿ ಗೌರಿ ಗಣೇಶ ಮಹಿಳಾ ಸಹಕಾರ ಸಂಘದ ಐದನೇ ಶಾಖೆ ಉದ್ಘಾಟನೆಯಲ್ಲಿ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಉತ್ತಮ ಪಾಟೀಲ ಶಿವಪ್ರಸಾದ ದೇವರು, ಅಭಯ ಮಗದುಮ್ಮ, ಅಶ್ವಿನಿ ಮಗದುಮ್ಮ ಇತರರಿದ್ದರು. 
ಬೆಳಗಾವಿ

ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ

ಬೋರಗಾಂವ:
ಬೆಡಕಿಹಾಳ ಗ್ರಾಮದಲ್ಲಿ ಗೌರಿ ಗಣೇಶ ಮಹಿಳಾ ಸಹಕಾರ ಸಂಘದ ಐದನೇ ಶಾಖೆ ಬುಧವಾರ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಗೌರಿ ಗಣೇಶ ಮಹಿಳಾ ಸಂಸ್ಥೆ ಸ್ಥಾಪಿಸಲಾಗಿದ್ದು, ಎಲ್ಲರೂ ಲಾಭ ಪಡೆದುಕೊಳ್ಳಬೇಕು ಎಂದರು.
ನಾಂದನಿ ಮಠದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹಾಗೂ ಶಿವಪ್ರಸಾದ ದೇವರು ಮಾತನಾಡಿ, ಗೌರಿ ಗಣೇಶ ಸಂಸ್ಥೆ ಮಹಿಳೆಯರಿಗೆ ಸಕಾಲದಲ್ಲಿ ಸಾಲ ನೀಡಿ ಅವರ ಆರ್ಥಿಕ ಪ್ರಗತಿಗೆ ಪ್ರಯತ್ನಿಸುತ್ತಿದೆ. ಸಂಸ್ಥಾಪಕ ಅಭಯ ಹಾಗೂ ಅಶ್ವಿನಿ ಮಗದುಮ್ಮ ಸಮಾಜದ ಉನ್ನತಿಗೆ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುದರ್ಶನ ಖೋತ, ಸುಜಾತಾ ಖೋತ, ಅಶೋಕ ಅರಗೆ, ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಇಂದ್ರಜೀತ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ದೀಪಕ ಖೋತ, ಸುರೇಶ ಖೋತ, ಅರುಣ ಬೋನೆ, ಸಚಿನ ಖೋತ, ಬಾಬಾಸಾಹೇಬ ಖೋತ, ತಾತ್ಯಾಸಾಹೇಬ ಖೋತ, ನಾಗರಾಜ ಖೋತ, ಆರ್.ಬಿ. ಅಭಯಕುಮಾರ, ಅಶ್ವಿನಿ ಮಗದುಮ್ಮ, ಸುಜಾತಾ ಪಾಟೀಲ ಇತರರಿದ್ದರು.