ಅಥಣಿ ಗಚ್ಚಿನಮಠದ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಶಿವಬಸವ ಸ್ವಾಮೀಜಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಉದಯ ಕಾರವೇಕಾರ, ಸುರೇಶ ಗೋಟಖಿಂಡಿ, ಶಿವಾನಂದ ದಿವಾನಮಳ, ಈರನಗೌಡ ಪಾಟೀಲ ಇತರರಿದ್ದರು. 
ಬೆಳಗಾವಿ

ಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ

ಪ್ರಮುಖ ಮುಖ್ಯಾಂಶಗಳು

  • ಗಚ್ಚಿನಮಠದ ಶಿವಬಸವ ಸ್ವಾಮೀಜಿ ಅಭಿಮತ
  • ಅದ್ದೂರಿ ಪಲ್ಲಕ್ಕಿ ಉತ್ಸವ
ಅಥಣಿ: ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಪುಣ್ಯಭೂಮಿ ದಕ್ಷಿಣಕಾಶಿ ಎಂದು ಪ್ರಸಿದ್ಧಿ ಪಡೆದು ರಾಜ್ಯಕ್ಕೆ ಮಾದರಿ ಪುಣ್ಯಕ್ಷೇತ್ರವಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಗಚ್ಚಿನಮಠದಲ್ಲಿ ಮಂಗಳವಾರ ಮುರುಘೇಂದ್ರ ಶಿವಯೋಗಿಗಳ ೧೦೫ನೇ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀಮಠಕ್ಕೆ ಆಗಮಿಸುವ ಭಕ್ತರಿಗೆ ಅರಿವು, ಅನ್ನ, ಆಶ್ರಯ ನೀಡಿ ದಾಸೋಹ ಪರಂಪರೆ ಮುನ್ನಡಿಸಿಕೊಂಡು, ಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಬೆಳಗ್ಗೆ ಶಿವಯೋಗಿಗಳ ಕರ್ತೃ ಗದ್ದುಗೆಗೆ ಅಭಿಷೇಕ, ಷೋಡಷೋಪಚಾರ, ಮಹಾಪೂಜೆ, ಬಿಲ್ವಾರ್ಚನೆ ನಂತರ ವಚನ ಸಂಪುಟ ಹಾಗೂ ಶಿವಯೋಗಿಗಳು ಬರೆದ ಹಸ್ತಪ್ರತಿಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಗಚ್ಚಿನಮಠಕ್ಕೆ ಆಗಮಿಸಿತು.
ಉದಯ ಕಾರವೇಕಾರ, ಸುರೇಶ ಗೋಟಖಿಂಡಿ, ಶಿವಾನಂದ ದಿವಾನಮಳ, ಈರನಗೌಡ ಪಾಟೀಲ, ಗಿರೀಶ ದಿವಾನಮಳ, ಅನವೀರ ಅಣೆಪ್ಪನವರ, ರಾಜು ಬಿಳ್ಳೂರ, ಹನುಮಂತ ಕಾಲುವೆ, ರಮೇಶ ಬಳೊಳ್ಳಿ, ಮಹಾಂತೇಶ ಕಾರವೇಕಾರ, ಸಂಗು ಕಲ್ಮಠ, ನಿತ್ಯಾನಂದ ಚರಂತಿಮಠ, ಚಂದು ತೇರದಾಳ, ಗುಂಡು ಸೊಳಸಿ, ಸಂತೋಷ ದಿವಾನಮಳ, ಸೋಮು ವಾಂಗಿ, ಮುರುಗೇಶ ನಿಡೊಣಿ, ಪಂಚಾಕ್ಷರಿ ಗೆಜ್ಜಿ, ಶಂಕರ ಅಳಿಗಿಡದ ಇತರರಿದ್ದರು.