ರಾಯಬಾಗ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಕೀಲರ ಸಂಘದಿಂದ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ನಿಮಿತ್ತ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಲಾಯಿತು. ಆರ್.ಎಸ್.ಶಿರಗಾಂವೆ, ಎಲ್.ಬಿ.ಚೌಗುಲೆ, ಬಿ.ಎನ್.ಬಂಡಗರ, ಎಂ.ಜಿ.ಉಗಾರೆ ಇತರರರಿದ್ದರು.
ರಾಯಬಾಗ: ದೇಶಕ್ಕೆ ಅಮೂಲ್ಯವಾದ ಸಂವಿಧಾನ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತೀಯರ ಮನದಲ್ಲಿ ಸದಾ ಸ್ಮರಣೀಯರಾಗಿದ್ದಾರೆ ಎಂದು ಹಿರಿಯ ವಕೀಲ ಆರ್.ಎಸ್.ಶಿರಗಾಂವೆ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಪ್ರತಿಯೊಬ್ಬರೂ ಬಾಬಾ ಸಾಹೇಬರ ಆದರ್ಶ ಪಾಲಿಸಬೇಕು ಎಂದರು.
ಹಿರಿಯ ವಕೀಲ ಎಲ್.ಬಿ.ಚೌಗುಲೆ, ಬಿ.ಎನ್.ಬಂಡಗರ, ಎಂ.ಜಿ.ಉಗಾರೆ, ಆರ್.ಎಲ್.ಅಸೋದೆ, ಆರ್.ಬಿ.ಕೊರವಿ, ಎಸ್.ಎಂ.ಕಳ್ಳೆ, ಎಸ್.ಆರ್.ಮಾಂಗ, ವಿ.ಎಚ್.ಕಮಾಲ, ಎಸ್.ಪಿ.ಕಾಂಬಳೆ, ಎಂ.ಎಂ.ಪಾಟೀಲ, ಗಣೇಶ ಕಾಂಬಳೆ, ಎಲ್.ಎಚ್. ನಾಗರಮುನ್ನೋಳ್ಳಿ, ಕೆ.ಎಲ್.ಕೆರೂರೆ, ಬಿ.ಎಲ್.ಕೋಳಿಗುಡ್ಡೆ, ಸಾಗರ ಝಂಡೇನ್ನವರ, ಮೇಘರಾಜ ಮಾಳಗೆ, ಅಣ್ಣಾಸಾಹೇಬ ಅಸೋದೆ ಇತರರಿದ್ದರು.