ಸಮೀಪದ ಪರಕನಹಟ್ಟಿ ಗ್ರಾಮದ ಸಿದ್ಧಾರೂಢ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದ ಈಚೆಗೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತೋಲಗಿ-ಚಿಕ್ಕಲದಿನ್ನಿ ಅದೃಶ್ಯಾನಂದ ಸ್ವಾಮೀಜಿ, ತಳಕಟನಾಳ ಸಿದ್ಧಾರೂಢ ಮಠದ ಅತ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಗೋಕಾಕದ ಬಸವರಾಜ ಶಾಸ್ತ್ರಿ, ಕುರಣಿಯ ಆನಂದ ಸ್ವಾಮೀಜಿ, ಸಂತೋಷಕುಮಾರ ಮಗದುಮ್ಮ, ಕಾಡಪ್ಪ ಪೈರಾಶ, ಬಾಳಪ್ಪ ಶರಣರು ಉಪಸ್ಥಿತರಿದ್ದರು. ಜಾತ್ರೆ ಅಂಗವಾಗಿ ಎರಡು ದಿನಗಳ ಕಾಲ ಹೋಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಭಜನಾ ಮೇಳ, ಮಕ್ಕಳಿಂದ ಗೀತಾ ಪಾರಾಯಣ, ಬಡಕುಂದ್ರಿಯ ಕಾಳಪ್ಪ ಬಡಿಗೇರ ಕರಿಕಟ್ಟಿಯ ರುದ್ರಪ್ಪ ಹೂಗಾರ ಸಂಗೀತ ಕಾರ್ಯಕ್ರಮ ಗಮನಸೆಳೆಯಿತು. ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಬಸಯ್ಯ ಹಿರೇಮಠ ನಿರೂಪಿಸಿದರು.