ದರೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಶಿಕಾಂತ ಪಡಸಲಗಿ ಗುರೂಜಿ ಮಾತನಾಡಿದರು. ಅಮರೇಶ್ವರ ಮಹಾರಾಜರು, ಲಲಿತಮ್ಮತಾಯಿ, ಚಿದಾನಂದ ಸವದಿ ಇತರರಿದ್ದರು. 
ಬೆಳಗಾವಿ

ಧರ್ಮದ ಅರಿವು ಮೂಡಲಿ

ಅಥಣಿ ಗ್ರಾಮೀಣ: ಯುವಜನರು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಂದ ದೂರವಾಗುತ್ತಿದ್ದು, ಪಾಲಕರು ನಮ್ಮ ಧರ್ಮ ಮತ್ತು ಸಂಸ್ಕೃತಿಯ ಮಹತ್ವ ತಿಳಿಸಿಕೊಡಬೇಕಿದೆ ಎಂದು ಕೌಲಗುಡ್ಡದ ಅಮರೇಶ್ವರ ಮಹಾರಾಜರು ನುಡಿದರು.
ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಮಹಾಶಿವಶರಣೆ ಅವ್ವಲಿಂಗಮ್ಮ ೨೮ನೇ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ತಂತ್ರಜ್ಞಾನದ ಭರಾಟೆಯಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮನೋಭಾವ ಕಡಿಮೆಯಾಗುತ್ತಿದೆ ಎಂದರು.
ಮುಖಂಡ ಚಿದಾನಂದ ಸವದಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗ್ರಾಮಸ್ಥರೆಲ್ಲರೂ ಧಾರ್ಮಿಕ ಮನೋಭಾವ ಮೂಡಿಸುತ್ತಿರುವುದು ಸಂತಸದ ವಿಷಯ ಎಂದರು.
ವಿಜಯಪುರ ಹಾಗೂ ಹುಬ್ಬಳ್ಳಿ ತಾಂತಾಶ್ರಮದ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅವ್ವಲಿಂಗಮ್ಮನ ಗದ್ದುಗೆಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಕಲ್ಲೂರಿನ ಲಲಿತಮ್ಮ ತಾಯಿ, ಶಶಿಕಾಂತ ಪಡಸಲಗಿ ಗುರೂಜಿ, ಶಂಕರ ಶರಣರು, ಸದಾಶಿವ ದೇಶಿಂಗೆ, ಚಂದ್ರಶೇಖರ ಗಾಣಿಗೇರ, ರಾಮಪ್ಪ ಗುಮತಾಜ, ದುಂಡಪ್ಪ ಪಡಸಲಗಿ, ಮಹೇಶ ತೇಲಿ, ಈರಪ್ಪ ಬಸಗೌಡರ, ತಮ್ಮಣ್ಣ ಸಾಂವಗಾಂವ, ಸುರೇಂದ್ರ ದಳವಾಯಿ, ಸದಾಶಿವ ಅವಟಿ ಇತರರಿದ್ದರು.