ರಾಯಬಾಗ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀಶೈಲ ಅವರ ಪ್ರೀತಿ ಬಂಗಾರ 5ನೇ ಚುಟುಕು ಸಂಕಲನವನ್ನು ಪ್ರಣಯ ಪಾಟೀಲ ಲೋಕಾರ್ಪಣೆ ಮಾಡಿದರು. ಈಶ್ವರ ಮಮದಾಪುರ, ಡಾ.ಕುಮಾರ ತಳವಾರ, ಡಿ.ಎಚ್.ಯಲ್ಲಟ್ಟಿ ಇತರರಿದ್ದರು. 
ಬೆಳಗಾವಿ

ಯುವಕರು ಸಾಹಿತ್ಯ ಕೃಷಿ ಮಾಡಲಿ

ರಾಯಬಾಗ: ಯುವಕರು ಸಾಹಿತ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಂಡು, ಮುಂದಿನ ಪೀಳಿಗೆಗೆ ಮಾದರಿಯಾಗಿಬೇಕು ಎಂದು ಜಿಪಂ ಮಾಜಿ ಸದಸ್ಯ ಪ್ರಣಯ ಪಾಟೀಲ ಹೇಳಿದರು.
ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯುವ ಕವಿ ಶಿರೂರ ಶ್ರೀಶೈಲ ಅವರ ಪ್ರೀತಿ ಬಂಗಾರ 5ನೇ ಚುಟುಕು ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹಿರಿಯ ಸಾಹಿತಿ ಈಶ್ವರ ಮಮದಾಪುರ ಮಾತನಾಡಿ, ಚುಟುಕು ಚಿಕ್ಕದಾದರೂ ಅದರ ಒಳಾರ್ಥ ಹಿರಿದಾಗಿರುತ್ತದೆ, ಶಿರೂರ ಶ್ರೀಶೈಲ ಅವರ ಚುಟುಕುಗಳಲ್ಲಿ ಹಾಸ್ಯ ಲಾಸ್ಯ, ವಿಡಂಬನೆ, ಸತಿಪತಿಗಳ ಸಂಬಂಧ, ಪ್ರೀತಿ-ಪ್ರೇಮ ಹೀಗೆ ಹಲವಾರ ಆಯಾಮಗಳಿಂದ ಕೂಡಿದ್ದು, ಓದುಗರಿಗೆ ಪ್ರಿಯ ಏನಿಸುವುದರಲ್ಲಿ ಸಂದೇಹವಿಲ್ಲ ಎಂದರು.
ಡಾ.ಕುಮಾರ ತಳವಾರ, ವಕೀಲ ಡಿ.ಎಚ್.ಯಲ್ಲಟ್ಟಿ, ಡಾ.ಪ್ರಶಾಂತ ಹೊತ್ತಗಿಮಠ, ಡಾ.ಎಸ್.ಎಂ.ಪಾಟೀಲ, ಶಿವಾನಂದ ಬೆಳಕೂಡ, ತುಕಾರಾಮ ವಂಟಗೋಡಿ, ಪಿ.ಎಸ್.ನಾಯಿಕ, ರವೀಂದ್ರ ಪಾಟೀಲ, ಕುಮಾರ ಅವಳೆ, ಎಚ್.ಎ.ಭಜಂತ್ರಿ, ಗಣೇಶ ಕಾಂಬಳೆ, ದಿಲೀಪ ಕಾಂಬಳೆ, ಅಶೋಕ ಅಂಗಡಿ, ಅನಿಲ ಕೊರವಿ, ಸಾಗರ ಝೆಂಡೆನ್ನವರ ಇತರರಿದ್ದರು. ಸಾಂಗಲಿಯ ಉಷಾಕಲಾ ಆಸ್ಪತ್ರೆ ಹಾಗೂ ಮಿರಜದ ಸೇವಾ ಸದನ ಆಸ್ಪತ್ರೆ ಹೃದಯ ರೋಗ ತಜ್ಞರು ಪಟ್ಟಣದ ನಾಗರಿಕರಿಗೆ ಉಚಿತ ಆರೋಗ್ಯ ಶಿಬಿರ ನಡೆಸಿದರು.