ಗುಂಡವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿ.ಶಂಕರಾನಂದ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರವನ್ನು ಸುಕುಮಾರ ಪಾಟೀಲ ಉದ್ಘಾಟಿಸಿದರು. ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಶಂಕರ ನಿಂಗನೂರ, ಎ.ಎಸ್.ಕಾಂಬಳೆ, ಆರ್.ಎಂ. ಮಹೇಶವಾಡಗಿ, ಬಾಹುಬಲಿ ಬ್ಯಾಡಗಿ ಇತರರಿದ್ದರು.
ಕುಡಚಿ: ಯುವಕರು ಸದಾ ಕ್ರಿಯಾಶೀಲರಾಗಿ ಇರಬೇಕೆಂದು ಪರಮಾನಂದವಾಡಿ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಗುಂಡವಾಡ ಗ್ರಾಮದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಡಾ.ಬಾಬಾಸಾಹೇಬ ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಬಿ.ಶಂಕರಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಚಿಕ್ಕೋಡಿ ಜಿಲ್ಲಾ ಪ್ರಭಾರ ಸಂಯೋಜನಾಧಿಕಾರಿ ಶಂಕರ ನಿಂಗನೂರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ ಮತ್ತು ಸೇವಾ ಮನೋಭಾವ ಬೆಳೆಯಲಿದೆ ಎಂದರು.
ಸಂಯೋಜನಾಧಿಕಾರಿ ಪ್ರೊ.ಶಂಕರ ನಿಂಗನೂರ, ಬಿ.ಶಂಕರಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಎಸ್.ಕಾಂಬಳೆ, ತಾಪಂ ಮಾಜಿ ಅಧ್ಯಕ್ಷ ಸುಖಮಾರ ಪಾಟೀಲ, ಬಾಹುಬಲಿ ಬ್ಯಾಡಗಿ, ತಾತ್ಯಾಸಾಹೇಬ ಪಾಟೀಲ, ಗಂಗಾರಾಮ ಪೂಜೇರಿ, ಬಾಳು ಸಾಂಗಲಿ, ನೇಮಿನಾಥ ಪಾಟೀಲ, ಮಾರುತಿ ಪೂಜೇರಿ, ಆದಿನಾಥ ಪಾಟೀಲ, ರಾವಸಾಹೇಬ ಪಾಟೀಲ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಆರ್.ಎಂ.ಮಹೇಶವಾಡಗಿ ಇತರರಿದ್ದರು.
ಎಸ್.ಎಸ್.ಕೊಕಟನೂರ ನಿರೂಪಿಸಿದರು.