ರಾಮದುರ್ಗದಲ್ಲಿ ಬನಶಂಕರಿದೇವಿ ರಥೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಗಣ್ಯರು ಉದ್ಘಾಟಿಸಿದರು. ಶಂಕ್ರಣ್ಣ ಮುರುಡಿ, ಪಿ.ಆರ್.ಸೂಳಿಭಾವಿ, ರಾಮಚಂದ್ರ ಯಾದವಾಡ ಇತರರಿದ್ದರು.
ನಗರದ ನೇಕಾರ ಪೇಟೆಯ ಬನಶಂಕರಿದೇವಿ ರಥೋತ್ಸವ ಪ್ರಯುಕ್ತ ಭಾನುವಾರ ದೇವಾಂಗ ಸಮುದಾಯ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯ ಗ್ರಾಮೀಣ ಜನರ ಬದುಕಿಗೆ ಹತ್ತಿರವಾಗಿದ್ದು, ನಮ್ಮ ಪೂರ್ವಜರು ಜಾನಪದದ ಮೂಲಕ ಸಾಮಾಜಿಕ ಮೌಲ್ಯಗಳನ್ನು ತಿಳಿಸುತ್ತಿದ್ದರು ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪಿ.ಆರ್.ಸೂಳಿಭಾವಿ, ಪತ್ರಕರ್ತ ರಾಮಚಂದ್ರ ಯಾದವಾಡ, ನೇಕಾರ ಸಮುದಾಯಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಎನ್.ಟಿ.ಹೂಲಿ, ಪ್ರದೇಶ ಕುರುಬ ಸಮಾಜದ ಅಧ್ಯಕ್ಷ ಪಡಿಯಪ್ಪ ಕ್ವಾರಿ ಮಾತನಾಡಿದರು. ಅರ್ಚಕ ನಿರಂಜನಸ್ವಾಮಿ ದೇವಾಂಗಮಠ ಆಶೀರ್ವಚನ ನೀಡಿದರು.
ಕುಬೇರ ಗರಡಿಮನಿ, ಹಿರಿಯರಾದ ಈರಪ್ಪಜ್ಜ ಕೊಣ್ಣೂರ, ಐ.ಜಿ.ರಾಮದುರ್ಗ, ಶಿವಾನಂದ ಬಳ್ಳಾರಿ, ಅಶೋಕ ಸೋರಿ, ಮಾಗುಂಡಪ್ಪ ಮುರುಡಿ, ರವಿ ಕರಡಿಗುಡ್ಡ, ಸಂಕಪ್ಪ ಮುಕ್ಕಯ್ಯನವರ, ವಿಠ್ಠಲ ಮುರುಡಿ, ಮನೋಜ ಕಾಂಕಾಣಿ, ರುದ್ರಪ್ಪ ಪಾಟೀಲ, ಶಂಕರ ಬೆನ್ನೂರ, ಕಷ್ಣಾ ಸೂಳಿಭಾವಿ ಇತರರಿದ್ದರು. ಬನಶಂಕರಿ ದೇವಸ್ಥಾನ ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ ಏಕನಾಥ ಕೊಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಖಾನಾಪೂರ ನಿರೂಪಿಸಿದರು. ತುಕಾರಾಂ ಕರದಿನ ವಂದಿಸಿದರು.