ನೇಸರಗಿ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ 80 ಎಂಟಿ ಸಾಮರ್ಥ್ಯದ ಇಲೆಕ್ಟ್ರಾನಿಕ್ ತೂಕದ ಯಂತ್ರ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ, ಬಾಳಪ್ಪ ಮಾಳಗಿ, ಎ.ಆರ್.ಮಾಳಣ್ಣವರ ಇತರರಿದ್ದರು. 
ಬೆಳಗಾವಿ

ತೂಕದ ಯಂತ್ರ ಸದುಪಯೋಗವಾಗಲಿ

ಗ್ರಾಮದ ಎಪಿಎಂಸಿ ಉಪ ಮಾರುಕಟ್ಟೆಯ ಪ್ರಾಂಗಣದಲ್ಲಿ 80 ಎಂಟಿ ಸಾಮರ್ಥ್ಯದ ಇಲೆಕ್ಟ್ರಾನಿಕ್ ತೂಕದ ಯಂತ್ರ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ. ರೈತರು ಬೆಳೆದ ಬೆಳಗಳಿಗೆ ಬೆಂಬಲ ಬೆಲೆ ಜತೆಗೆ ತೂಕದಲ್ಲಿ ಮೋಸವಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮುಖಂಡ ಬಾಳಪ್ಪ ಮಾಳಗಿ, ಎ.ಆರ್.ಮಾಳಣ್ಣವರ, ಪ್ರಕಾಶ ತೋಟಗಿ, ಚನಗೌಡ ಪಾಟೀಲ, ನಿಂಗಪ್ಪ ತಳವಾರ, ಮಕ್ಬುಲ್ ಬೇಪಾರಿ, ಯಮನಪ್ಪ ಪೂಜೇರಿ, ಬಸವರಾಜ ಚಿಕ್ಕನಗೌಡ್ರ, ಎಪಿಎಂಸಿ ಸಹಕಾರ್ಯದರ್ಶಿ ಸುನೀಲ ಘೋಡಬೋಲೆ, ಬಸವರಾಜ ಚಿಗರಿ, ಎಇಇ ರಾಘವೇಂದ್ರ ಕೊರತಿ, ಎಇ ಸಂಗಮೇಶ, ಬಾಳಪ್ಪ ಕುಂಟಗಿ ಇತರರಿದ್ದರು.