ರಾಮದುರ್ಗ ನಗರದ ವಿದ್ಯಾ ಪ್ರಸಾರಕ ಸಮಿತಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅನುಬೋಧನಾ ಕಾರ್ಯಾಗಾರವನ್ನು ಪ್ರಾಚಾರ್ಯ ಡಾ.ಆರ್.ಎಲ್.ಕುಳ್ಳೂರ ಉದ್ಘಾಟಿಸಿದರು. ಡಾ.ಎನ್.ಎನ್.ವಾಳ್ವೇಕರ ಇತರರಿದ್ದರು. 
ಬೆಳಗಾವಿ

ಪ್ರಶಿಕ್ಷಣಾರ್ಥಿಗಳು ಕೌಶಲ ರೂಢಿಸಿಕೊಳ್ಳಲಿ

ಶಂಕರ ಗೆಜ್ಜಿ
ರಾಮದುರ್ಗ: ತರಬೇತಿ ಹಂತದಲ್ಲಿ ಅನುಬೋಧನಾ ಕಾರ್ಯಾಗಾರದಿಂದ ಪಡೆದ ಜ್ಞಾನ, ಬೋಧನಾ ಸಮಯದಲ್ಲಿ ಸಹಕಾರಿಯಾಗುತ್ತದೆ.
ಪ್ರಶಿಕ್ಷಣಾರ್ಥಿಗಳು ಅನುಬೋಧನೆಯ ಕೌಶಲಗಳ ಜ್ಞಾನ ಪಡೆದುಕೊಳ್ಳಬೇಕು ಎಂದು ಪ್ರಾಚಾರ್ಯ ಡಾ.ಆರ್.ಎಲ್.ಕುಳ್ಳೂರ ಹೇಳಿದರು. ನಗರದ ವಿದ್ಯಾ ಪ್ರಸಾರಕ ಸಮಿತಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಇಡಿ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಅನುಬೋಧನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ತರಬೇತಿ ಅವಧಿಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಡಾ.ಎನ್.ಎನ್.ವಾಳ್ವೇಕರ ಮಾತನಾಡಿ, ಶಿಕ್ಷಣ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆಯುವ ಬಾವಿ ಶಿಕ್ಷಕರಿಗೆ ವೃತ್ತಿ ಬದುಕಿನಲ್ಲಿ ಎದುರಾಗುವ ಸಮಸ್ಯೆ ಹಾಗೂ ವಿದ್ಯಾರ್ಥಿಗಳಿಗೆ ನೀಡಬೇಕಾದ ಜ್ಞಾನದ ಮಾಹಿತಿ ನೀಡಲಾಗುತ್ತಿದೆ. ಪಠ್ಯದ ಜತೆಗೆ
ಪ್ರಶಿಕ್ಷಣಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಜಿಮಖಾನಾ ಉಪಾಧ್ಯಕ್ಷ ಪ್ರೊ.ಜಿ.ಬಿ.ಬಟಕುರ್ಕಿ, ಪ್ರೊ.ಜಿ.ಪಿ.ಗಡದೆ, ಡಾ.ವಿ.ಬಿ.ವಗ್ಗರ, ಪ್ರೊ.ಶಿವಲೀಲಾ ಗೋಲನ್ನವರ, ಭಾರತಿ ಪಮ್ಮಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ರಾಜು ಹಣಸಿ, ಅನುಷಾ ರೊಕ್ಕದಕಟ್ಟಿ ಇತರರಿದ್ದರು. ವಿದ್ಯಾರ್ಥಿನಿ ಸತ್ಯಕ್ಕ ಹೊಸಕೋಟಿ ಸ್ವಾಗತಿಸಿದರು. ತನುಜಾ ಹಿರೇಮಠ ನಿರೂಪಿಸಿದರು.