ಸವದತ್ತಿಯಲ್ಲಿ ಕರ್ನಾಟಕ ದರ್ಶನ 2026 ಕಾರ್ಯಕ್ರಮಕ್ಕೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ಎ.ಎ.ಖಾಜಿ, ಗಿರೀಶ ಮುನವಳ್ಳಿ, ಪ್ರಶಾಂತ ಹಂಪಣ್ಣವರ ಇತರರಿದ್ದರು. 
ಬೆಳಗಾವಿ

ವಿದ್ಯಾರ್ಥಿಗಳಿಗೆ ಸ್ಮರಣೀಯ ಅನುಭವವಾಗಲಿ

ಅರ್ಚನಾ ಜಾಧವ

ಪ್ರಮುಖ ಮುಖ್ಯಾಂಶಗಳು

  • ಶಾಸಕ ವಿಶ್ವಾಸ ವೈದ್ಯ ಅಭಿಮತ
  • ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ
ಸವದತ್ತಿ: ಪಠ್ಯ ಪುಸ್ತಕ ಜ್ಞಾನಕ್ಕಿಂತ ಪ್ರಾಯೋಗಿಕ ಅನುಭವ ಅಗತ್ಯವಾಗಿದ್ದು, ಶೈಕ್ಷಣಿಕ ಪ್ರವಾಸಗಳು ವಿದ್ಯಾರ್ಥಿಗಳ ಜ್ಞಾನವಿಸ್ತಾರ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಮಹತ್ತರ ನೆರವಾಗುತ್ತವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರದ ಬಿಆರ್‌ಸಿ ಆವರಣದಲ್ಲಿ ಸೋಮವಾರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ದರ್ಶನ-2026 ಉಚಿತ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ರಾಜ್ಯದ ಐತಿಹಾಸಿಕ ತಾಣ, ಕಲೆ, ಸಂಸ್ಕೃತಿ ಮತ್ತು ಪರಂಪರೆಗಳನ್ನು ನೇರವಾಗಿ ಅರಿತುಕೊಳ್ಳುವ ಅವಕಾಶ ಸಿಗಲಿದೆ. ಈ ಅನುಭವವು ಅವರ ಭವಿಷ್ಯದ ಬೆಳವಣಿಗೆಗೆ ದಿಕ್ಕು ತೋರಿಸುವಂತಾಗಲಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಮಾತನಾಡಿ, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯದ ಪರಂಪರೆ ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಬಿಆರ್‌ಪಿ ಎಂ.ಎನ್.ಕರಡಿಗುದ್ದಿ, ಇಸಿಒ ಅರ್ಜುನ್ ಕಾಮನ್ನವರ, ಸಿಆರ್‌ಪಿ ರಾಮಚಂದ್ರಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಕುರಿ, ಪ್ರಶಾಂತ ಹಂಪ್ಪನ್ನವರ, ಗಿರೀಶ ಮುನವಳ್ಳಿ, ಪ್ರಕಾಶ ಹೆಮ್ಮರಡಿ, ಸುನೀಲ ಏಗನಗೌಡರ, ಜಗದೀಶ ಶಿರಸಂಗಿ, ಶಿವಾನಂದ ಪಟ್ಟಣಶೆಟ್ಟಿ, ಎನ್‌ಜಿಒ ಸಂಘದ ಸದಸ್ಯ ಮಹಾಂತೇಶ ಬ್ಯಾಹಟ್ಟಿ, ಶಿಕ್ಷಣ ಸಂಯೋಜಕ ಅರ್ಜುನ ಕಾಮಣ್ಣವರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎನ್.ಕರಡಿಗುಡ್ಡ, ಶಿಕ್ಷಕರಾದ ರುದ್ರಪ್ಪ ನಿಲೂಗಲ್ಲ, ಜೈನಬಿ ಯಲಿಗಾರ, ಜಯಶ್ರೀ ಬಡಕಪ್ಪನವರ ಇತರರಿದ್ದರು.