ಐನಾಪುರ ಪಟ್ಟಣದ ಶಾಂತಿಸಾಗರ ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ ರಾಹುಲ ಕಟಗೇರಿ ಅವರನ್ನು ಸನ್ಮಾನಿಸಲಾಯಿತು. ಬಾಬುರಾವ ಮೋಳೆಕರ, ಸರಸ್ವತಿ ಬ್ಯಾಡಗಿ ಇತರರಿದ್ದರು. 
ಬೆಳಗಾವಿ

ಸಾಮಾಜಿಕ ಪಿಡುಗು ತೊಲಗಲಿ

ಐನಾಪುರ: ಮಕ್ಕಳ ಮೇಲಿನ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗು ತೊಲಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ವಕೀಲ ರಾಹುಲ ಕಟಗೇರಿ ಹೇಳಿದರು.
ಪಟ್ಟಣದ ಶಾಂತಿಸಾಗರ ಆಂಗ್ಲ ಮಾಧ್ಯಮ ಶಾಲೆ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳನ್ನು ರಕ್ಷಿಸಲು ಪೋಕ್ಸೋ ಕಾಯ್ದೆ ಬೆಂಬಲವಿದ್ದು, ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಿ ಜೀವನದಲ್ಲಿ ಜಾಗೃತಿ, ಶಿಸ್ತು ಮೈಗೂಡಿಸಿಕೊಳ್ಳಬೇಕು ಎಂದರು.
ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ ಮಾನೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಮಹಾದೇವಿ ಶಿರಗುಪ್ಪಿ ಮಾತನಾಡಿದರು. ಅರುಣ ಗಾಣಿಗೇರ, ಪಾಯಪ್ಪ ಕುಡವಕ್ಕಲಗಿ,
ಆರ್.ಬಿ.ಬಸನ್ನವರ ಇತರರಿದ್ದರು.