ಮಲ್ಲಮ್ಮನ ಬೆಳವಡಿ ಗ್ರಾಮಕ್ಕೆ ಆಗಮಿಸಿದ ಜ್ಯೋತಿ ಯಾತ್ರೆ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿದರು. ಪ್ರಕಾಶ ಹುಂಬಿ, ಚಂದ್ರಶೇಖರ ಕಾರಿಮನಿ, ಈರಣ್ಣ ಕರಿಕಟ್ಟಿ, ಮಡಿವಾಳಪ್ಪ ಕಾಡೇಶನವರ ಇತರರಿದ್ದರು. 
ಬೆಳಗಾವಿ

ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗಲಿ

ರಾಘವೇಂದ್ರಗೌಡ ಭೀ ಪಾಟೀಲ್

ರಾಣಿ ಬೆಳವಡಿ ಮಲ್ಲಮ್ಮ ಪ್ರಪ್ರಥಮ ಮಹಿಳಾ ಸೈನ್ಯ ಕಟ್ಟಿ ತನ್ನ ಸಂಸ್ಥಾನಕ್ಕಾಗಿ ಶಿವಾಜಿ ಮಹಾರಾಜರ ಸೈನ್ಯದೊಂದಿಗೆ ಹೋರಾಡಿ ಮಾದರಿಯಾಗಿದ್ದಾರೆ. ರಾಣಿ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ವೀರರಾಣಿ ಬೆಳವಡಿ ಮಲ್ಲಮ್ಮನ ವರ್ಧಂತಿ ಮಹೋತ್ಸವ ಅಂಗವಾಗಿ ಸವದತ್ತಿ ತಾಲೂಕಿನ ಹೂಲಿ ರಾಜಗುರು ಹಿರೇಮಠದಲ್ಲಿ ಅಜ್ಜಯ್ಯಶಾಸಿ ಅವರಿಂದ ಪ್ರಜ್ವಲನೆಗೊಂಡು ಮಲ್ಲಮ್ಮನ ಬೆಳವಡಿ ಗ್ರಾಮಕ್ಕೆ ಮಂಗಳವಾರ ತಲುಪಿದ ಜ್ಯೋತಿ ಯಾತ್ರೆ ಬರಮಾಡಿಕೊಂಡು ಅವರು ಮಾತನಾಡಿದರು.

ಮುಖಂಡ ಪ್ರಕಾಶ ಹುಂಬಿ ಮಾತನಾಡಿ, ಬೆಳಗಾವಿ ಸುವರ್ಣ ವಿಧಾನಸೌಧ ಮುಂಬಾಗದಲ್ಲಿ ವೀರರಾಣಿ

ಬೆಳವಡಿ ಮಲ್ಲಮ್ಮನವರ ಅಶ್ವಾರೂಢ ಮೂತಿ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾರಿಮನಿ, ಜಿಪಂ ಮಾಜಿ ಸದಸ್ಯ ಈರಣ್ಣ ಕರಿಕಟ್ಟಿ, ಈಶಪ್ರಭು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಡಿವಾಳಪ್ಪ ಕಾಡೇಶನವರ,

ರಾಚಯ್ಯ ರೊಟಯ್ಯನವರ, ಬಸಯ್ಯ ಭೋಜಯ್ಯನವರ, ವಿಶ್ವನಾಥ ಪೂಜಾರಿ, ಪಿಂಟು

ಗುಡ್ಡದಮಠ, ಪ್ರಾಚಾರ್ಯ ಮಹಾಂತೇಶ ಉಪ್ಪಿನ, ಸೊಮೇಶ್ವರ ಶುಗರ್ಸ್ ನಿರ್ದೇಶಕ ರಾಚಪ್ಪ ಮಟ್ಟಿ, ಬಿ.ಜಿ.ದೇಗಾವಿ, ದೈಹಿಕ ಶಿಕ್ಷಣ ಶಿಕ್ಷಕ ಶಂಕರ ಕರಿಕಟ್ಟಿ, ಡಾ.ಎ.ಬಿ.ಪಾಟೀಲ, ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸವಿತಾ ಪಾಟೀಲ, ಮುಗಟ್ ಹುದಲಿ, ರಂಜಾನ್, ವಿಠ್ಠಲ ಪಿಸೆ, ಯಲ್ಲಪ್ಪ ಸಿದ್ದನವರ, ಉದ್ಯಮಿ ನಿಂಗಣ್ಣ ನೇಸರಗಿ, ಮಹೇಶ ಕಾರಿಮನಿ, ಸುಭಾಸ ಚಿಕ್ಕನಗೌಡ್ರ, ಬಸವರಾಜ ಬಳಿಗಾರ ಇತರರಿದ್ದರು. ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಇತರರಿದ್ದರು.