ಕಕ್ಕೇರಿಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಸಿಆರ್‌ಪಿ ಈರಣ್ಣ ಅಂಕಲಗಿ ಚಾಲನೆ ನೀಡಿದರು. ಕವಿತಾ ಹಂಚಿನಮನಿ, ರಿಯಾಜ್ ಅಹ್ಮದ್ ಪಟೇಲ್, ಭೀಮಪ್ಪ ಅಂಬೋಜಿ, ದಯಾನಂದ ಗುಪಿತ, ಭದ್ರಪ್ಪ ದೊಡ್ಡಮನಿ ಇತರರಿದ್ದರು
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಖಾನಾಪುರ ಸ್ಥಳೀಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಮೂಹ ಸಂಪನ್ಮೂಲ ಕೇಂದ್ರ ಕಕ್ಕೇರಿ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,
ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬುನಾದಿ ಸಾಕ್ಷರತೆ ಹೆಚ್ಚಿಸಲು ಈ ಕಾರ್ಯಕ್ರಮ ಸಹಕರಿಯಾಗಲಿದೆ ಎಂದರು. ಅಖಿಲ ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಕಿಶೋರ ಮಿಠಾರಿ, ಗ್ರಾಪಂ ಅಧ್ಯಕ್ಷೆ ಕವಿತಾ ಹಂಚಿನಮನಿ, ಗ್ರಾಪಂ ಸದಸ್ಯ ರಿಯಾಜ್‌ಅಹ್ಮದ್ ಪಟೇಲ್ ಮಾತನಾಡಿದರು.
ಮುಖ್ಯಶಿಕ್ಷಕ ಎಸ್.ಬಿ.ಬಡಿಗೇರ, ಮುಖ್ಯಶಿಕ್ಷಕ ಐ.ಎ್.ಪಾಟೀಲ, ಅಸ್ಪಾಕ್ ಪಾಟೀಲ, ಪಿ.ಸಿ. ಪಾಳೇಕರ, ಬಸವರಾಜ ಮೇದಾರ, ಅತ್ತರಲಿ ತಹಸೀಲ್ದಾರ್, ಬಾಹುಬಲಿ ಉಪಾಧ್ಯ, ಸಿ.ಜಿ.ಬಾವಿಮನಿ, ನಜಮೀನಬಾನು ಬೆಳಗಾಂಕರ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ವೈ.ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಮಂಗು ಮಾಳಿ, ರಮೇಶ ಕೊಚೇರಿ, ಗ್ರಾಪಂ ಸದಸ್ಯರಾದ ಭೀಮಪ್ಪ ಅಂಬೋಜಿ, ದಯಾನಂದ ಗುಪಿತ, ಭದ್ರಪ್ಪ ದೊಡ್ಡಮನಿ ಇತರರಿದ್ದರು.