ಕರಡಿಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಬಸವರಾಜ ಐನಾಪುರ, ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಇತರರಿದ್ದರು.
- ತಾಪಂ ಇಒ ಬಸವರಾಜ ಐನಾಪುರ ಅಭಿಮತ
- ಸ್ಕೂಲ್ ಪ್ರಾರಂಭೋತ್ಸವದಲ್ಲಿ ಭಾಗಿ ಪುಸ್ತಕ ವಿತರಣೆ
ರಾಮದುರ್ಗ: ಮಕ್ಕಳಿಗಾಗಿ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಅತ್ಯಾಧುನಿಕ ಸೌಲಭ್ಯ ಕಲ್ಪಿಸುತ್ತಿದೆ. ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಾಪಂ ಇಒ ಬಸವರಾಜ ಐನಾಪುರ ಹೇಳಿದರು.
ತಾಲೂಕಿನ ಕರಡಿಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೇಸಿಗೆ ರಜೆ ಮುಗಿಸಿ ಮುಂದಿನ ತರಗತಿಗೆ ತೆರಳುತ್ತಿರುವ ವಿದ್ಯಾರ್ಥಿಗಳು ಹೊಸ ಪಠ್ಯತೇರ ಚಟುವಟಿಕೆ ಹಾಗೂ ಚಿಂತನೆ ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಕಾಂಬಳೆ ಮಾತನಾಡಿ, ಪಾಲಕರು ಶಿಕ್ಷಕರೊಂದಿಗೆ ನಿರಂತರ ಸಂಪರ್ಕ ಹೊಂದಿ, ಮಕ್ಕಳ ಶೈಕ್ಷಣಿಕ ಪ್ರಗತಿ ವಿಚಾರಣೆ ನಡೆಸಬೇಕು. ಶಾಲೆ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದರು.
ಬಿಸಿಯೂಟ ತಾಲೂಕು ಯೋಜನಾಧಿಕಾರಿ ರಾಜಶೇಖರ ಹಿರೇಮಠ, ಹೊಸಕೇರಿ-ಅಸೂಟಿ ಮಠದ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಡಿ ಪಿಡ್ಡಮ್ಮನವರ, ಮುಖಂಡರಾದ ವೈ.ಸಿ.ಗುಡ್ಡದ, ಎಚ್.ಎಂ.ಅಜ್ಜೋಡಿ, ಪಿ.ಎಚ್.ಇಡಗಲ್, ಎಂ.ಎ್.ತಳವಾರ, ಐ.ಬಿ.ಗುರಪ್ಪನವರ, ಎಸ್.ಎಚ್.ಕಾಳಮ್ಮನವರ, ಟಿ.ಎಂ.ದಾಸರ, ಸಿದ್ದಪ್ಪ ಮಕ್ಕನ್ನವರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ಛಾಯಪ್ಪಗೋಳ, ಶಿಕ್ಷಣ ಸಂಯೋಜಕ ಆರ್.ವೈ.ಮೇತ್ರಿ, ಸಿಆರ್‌ಸಿ ಆರ್.ಆರ್.ನೀಲಗಾರ ಮುಖ್ಯಶಿಕ್ಷಕ ಅಡವಯ್ಯ ಶಿರಗುಂಪಿಮಠ, ಶಿಕ್ಷಕ ಮಾರುತಿ ಇತರರಿದ್ದರು.