ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ಬಸಗೌಡ ಪಾಟೀಲ, ನಾನಾಸಾಹೇಬ ಪಾಟೀಲ, ಉಮೇಶ ಪಾಟೀಲ, ಶಿವನಗೌಡ ಪಾಟೀಲ ಇತರರಿದ್ದರು. 
ಬೆಳಗಾವಿ

ಸಹಕಾರ ಸಂಘಗಳ ಸೌಲಭ್ಯ ಬಳಕೆಯಾಗಲಿ

ಸೋಮಲಿಂಗ ತಳವಾರ
ಚನ್ನಮ್ಮನ ಕಿತ್ತೂರು: ಜನರ ಅನುಕೂಲಕ್ಕೆಂದು ಸರ್ಕಾರದಿಂದ ಸ್ಥಾಪನೆಯಾದ ಸಹಕಾರ ಸಂಗಳ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ರಾಣಿ ಚನ್ನಮ್ಮ ಸಭಾಭವನದಲ್ಲಿ ರಾಜ್ಯ ಸರ್ಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಬೆಲಹೊಂಗಲ, ಕಿತ್ತೂರು ತಾಲೂಕಿನ ಸಹಕಾರ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಕುಲಕಸುಬುಗಳಾದ ಮೀನುಗಾರಿಕೆ, ಕರಕುಶಲ, ಕೆಮಗ್ಗ ಉದ್ಯೋಗಗಳಿಗೆ ಸಹಕಾರ ಸಂಗಳಲ್ಲಿ ಸಾಕಷ್ಟು ಸೌಲಭ್ಯಗಳಿದ್ದು, ಜನರಿಗೆ ಅತ್ಯಾಧುನಿಕ ಯಂತ್ರಗಳು ಒದಗಿಸುವ ಕೆಲಸಗಳನ್ನು ಸಂ&ಸಂಸ್ಥೆಗಳು ಮಾಡುತ್ತಿವೆ. ಯುವಜನರಿಗೆ ಹೆಚ್ಚಿನ ತರಬೇತಿ ನೀಡಿ ಅಭಿವದ್ಧಿಪಡಿಸಲಿ ಎಂದರು.
ಪ್ರಾಂಶುಪಾಲ ಕೆಐಸಿಎಂ ಚಂದ್ರಶೇಖರ ಸಹಕಾರ ಉದ್ಯಮಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಖಿಲ ವರ್ಗದ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು. ಜನರ ಜೀವನ ಉತ್ತಮಪಡಿಸಲು ಸಹಕಾರ ಸಂಸ್ಥೆಗಳ ಮೂಲಕ ರಾಜ್ಯ ಸರ್ಕಾರ ವಿವಿಧ ಯೋಜನೆ ಜಾರಿಗೆ ತಂದಿದ್ದು, ಸದುಪಯೋಗ ಪಡೆಯಬೇಕು. ಭಾರತದ ವಸ್ತುಗಳು ವಿದೇಶದಲ್ಲಿ ಮಾರಾಟವಾದಾಗ ದೇಶ ಅಭಿವದ್ಧಿಗೆ ಸಾಯಾಗಲಿದೆ ಎಂದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯ ಬಸಗೌಡ ಪಾಟೀಲ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ ನಿರ್ದೇಶಕ ನಾನಾಸಾಹೇಬ ಪಾಟೀಲ, ನಿರ್ದೇಶಕ ಉಮೇಶ ಪಾಟೀಲ, ಮಲಪ್ರಭಾ ಸಕ್ಕರೆ ಕಾರ್ಖಾನೆ ಉಪಾಧ್ಯ ಶಿವನಗೌಡ ಪಾಟೀಲ, ಬಸವರಾಜ ಸುಲ್ತಾನಪುರಿ, ಶಂಕರಗೌಡ ದೊಡ್ಡಗೌಡ, ಬಸವರಾಜ ಕುಗಟಿ, ಬಾಬು ಕಟ್ಟಿ, ಸಂಜೀವ ಸೋನಪ್ಪನವರ, ಹಾಲಪ್ಪ ಜಗ್ಗಿನವರ, ದೇವು ಪಾಟೀಲ ಇತರರಿದ್ದರು.