ಕುಡಚಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಗಣತಿದಾರರು ಮತ್ತು ಮೇಲ್ವಿಚಾರಕರ ಮೊದಲನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಉದಯಕುಮಾರ ಘಟಕಾಂಬಳೆ, ಸುಲೇಮಾನ್ ಶೇಖ್, ವಿನೋದ ಚೌಹಾಣ, ಮುಝಕೀರ್ ಬಾಗೆ ಇತರರಿದ್ದರು. 
ಬೆಳಗಾವಿ

ಗಣತಿದಾರರು ಪಾರದರ್ಶಕ ದತ್ತಾಂಶ ಸಂಗ್ರಹಿಸಲಿ

ಕುಡಚಿ: ಜನಗಣತಿ ಸಂಪೂರ್ಣ ಡಿಜಿಟಲ್ ಆಧಾರಿತ ಪ್ರಕ್ರಿಯೆ ಎಂದು ಕುಡಚಿ ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಹೇಳಿದರು.
ಪಟ್ಟಣದ ಪುರಸಭೆ ವತಿಯಿಂದ ಈಚೆಗೆ ಆಯೋಜಿಸಿದ್ದ ಜನಗಣತಿ-2027ರ ಗಣತಿದಾರರು ಮತ್ತು ಮೇಲ್ವಿಚಾರಕರ ಮೊದಲನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಗಣತಿದಾರರಿಗೆ ಮೂರು ಹಂತದಲ್ಲಿ ತರಬೇತಿ ಇದ್ದು, ದೋಷಮುಕ್ತ ಹಾಗೂ ಪಾರದರ್ಶಕ ಮಾಹಿತಿ ಸಂಗ್ರಹಣೆ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಮಾಹಿತಿ ಸಲ್ಲಿಸಲು ಸ್ವಯಂ ಗಣತಿ ವ್ಯವಸ್ಥೆ ನೀಡಲಾಗುತ್ತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ 48 ಬ್ಲಾಕ್‌ಗಳಿದ್ದು 48 ಗಣತಿದಾರರು, 7 ಕಾಯ್ದಿರಿಸಿದ ಗಣತಿದಾರರು, 8 ಮೇಲ್ವಿಚಾರಕರು, 3 ಕಾಯ್ದಿರಿಸಿದ ಮೇಲ್ವಿಚಾರಕರು ಹಾಗೂ ಇಬ್ಬರು ತರಬೇತುದಾರರನ್ನು ನೇಮಿಸಲಾಗಿದೆ ಎಂದರು. ಸುಲೇಮಾನ್ ಶೇಖ್, ವಿನೋದ ಚೌಹಾಣ, ಮುಝಕೀರ್ ಬಾಗೆ, ವೈ.ಆರ್.ಯಲ್ಲಟ್ಟಿ, ಬಸವರಾಜ ಹಳ್ಳಿ ಇತರರಿದ್ದರು.