ಕೊಕಟನೂರ ಗ್ರಾಮದ ಪಿಕೆಪಿಎಸ್​ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಲಕ್ಷ$್ಮಣ ಸವದಿ, ಅಮರೇಶ್ವರ ಮಹಾರಾಜರು, ಶ್ರೀಶೆಲ ಕಾಡದೇವರಮಠ, ಶಾನವ್ವ ಪೂಜಾರಿ, ಶಾಮರಾವ ಪೂಜಾರಿ ಇತರರಿದ್ದರು. 
ಬೆಳಗಾವಿ

ಸಹಕಾರ ಸಂಘ ರೈತರ ಸೇವೆ ಮಾಡಲಿ

ಅಥಣಿ ಗ್ರಾಮೀಣ: ಸಹಕಾರ ಸಂಗಳ ಉನ್ನತಿ ಆಡಳಿತ ಮಂಡಳಿ ಶ್ರಮ ಹಾಗೂ ಪ್ರಾಮಾಣಿಕ ಬದ್ಧತೆ ಮೇಲೆ ನಿಂತಿದ್ದು, ಗ್ರಾಮದ ಪಿಕೆಪಿಎಸ್​ ಸಂಘ ರೆತರ ಸೇವೆಗೆ ಮುಡಿಪಾಗಿಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೊಕಟನೂರ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘ ಕಟ್ಟಡ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಸಕ್ಕರೆ ಕಾರ್ಖಾನೆಗಳಿಗೆ ರಾಷ್ಟ್ರೀಕೃತ ಬ್ಯಾಂಕಗಳು ಸಾಲ ನೀಡಲು ಹಿಂದೇಟು ಹಾಕುವಾಗ ಉತ್ತರ ಕರ್ನಾಟಕದ ಡಿಸಿಸಿ ಬ್ಯಾಂಕುಗಳು ಸಾಲ ನೀಡಿದ್ದಕ್ಕೆ ರೆತರು ಅತಿಹೆಚ್ಚು ಕಬ್ಬು ಬೆಳೆಯಲು ಸಾಧ್ಯವಾಗಿದೆ. ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯ 28ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿಗೆ ಸಹಕಾರ ಸಂಗಳೇ ಆಶ್ರಯವಾಗಿವೆ ಎಂದರು.

ಕವಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಶಾಸಕ ಲಕ್ಷ$್ಮಣ ಸವದಿ 1486 ಕೋಟಿ ರೂ. ಮೊತ್ತದ ಕೊಟ್ಟಲಗಿ ಅಮ್ಮಾಜೇಶ್ವರಿ ಯೋಜನೆ ಹಾಗೂ 149 ಕೋಟಿ ರೂ. ವೆಚ್ಚದ ಕೆರೆ ತುಂಬುವ ಬೃಹತ್​ ಯೋಜನೆ ತಂದು ರೆತರ ಬಾಳಿಗೆ ಬೆಳಕಾಗಿದ್ದಾರೆ. ಸಹಕಾರ ಸಚಿವರಾಗಿದ್ದಾಗ ರೆತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.

ವೇದಮೂರ್ತಿ ಶ್ರೀಶೆಲ ಕಾಡದೇವರಮಠ ಮಾತನಾಡಿದರು. ಸಂದ ಅಧ್ಯ ಅಣ್ಣಪ್ಪ ಖೋತ ಅಧ್ಯತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ, ಅಥಣಿ ಶಾಖೆ ಡಿಸಿಸಿ ಬ್ಯಾಂಕ್​ ಅಧಿಕಾರಿಗಳಾದ ಶಂಕರ ಸಂದೇಶ್ವರ, ಚೇತನ ದಳವಾಯಿ, ಮಹಾದೇವ ಕುಂಬಾರ, ಗ್ರಾಪಂ ಅಧ್ಯೆ ಶಾನವ್ವ ಪೂಜಾರಿ, ಉಪಾಧ್ಯ ಅರ್ಜುನ ಪೂಜಾರಿ, ಸುಭಾಷ ಸೋನಕರ, ಮಾನಸಿಂಗ ಮಗರ, ಮನೋಹರ ಜಾಧವ, ನಿರ್ದೇಶಕರಾದ ವೀರೇಂದ್ರ ಹಳಕಿ, ಸುರೇಶ ಪಾಟಣಕರ, ಸುಮೀತ ಪತ್ತಾರ, ಸಂಗಪ್ಪ ಅಡಹಳ್ಳಿ, ಈಶ್ವರ ಜಗದಾಳ, ಭರಮಾ ಬಣಜ, ದಾನವ್ವ ಕುಮಟಗಿ, ಮಲ್ಲಿಕಾರ್ಜುನ ಹಿರೇಮಠ, ಕಾಡೇಶ ಕಾಳಾಪಾಟೀಲ, ಸಂಜೀವ ಮುದಕಣ್ಣವರ, ಸಂತೋಷ ಮಾಳಿ ಇತರರಿದ್ದರು.