ಚಿಕ್ಕೋಡಿ ಪಟ್ಟಣದ ಬಿ.ಕೆ. ಕಾಲೇಜಿನಲ್ಲಿ ಮಾದಕದ್ರವ್ಯ ವ್ಯಸನ ತಡೆ ಜಾಗೃತಿ ಕಾರ್ಯಕ್ರಮ ಜರುಗಿತು. ಪಿಎಸ್‌ಐ ಬಸಗೌಡ ನೇರಲಿ, ಡಾ.ಬಿ.ಜಿ.ಕುಲಕರ್ಣಿ, ಸದಾಶಿವ ಹಾದಿಮನಿ, ಸಿದ್ದಣ್ಣ ನಾಯಕ ಇತರರಿದ್ದರು.
- ಪಿಎಸ್‌ಐ ಬಸಗೌಡ ನೇರಲಿ ಆಶಯ
- ಮಾದಕದ್ರವ್ಯ ವ್ಯಸನ ತಡೆ ಜಾಗೃತಿ
ಚಿಕ್ಕೋಡಿ: ವಿದ್ಯಾರ್ಥಿಗಳು ದುಶ್ಚಟಗಳಿಂದ ಹೊರಬಂದು ಒಳ್ಳೆಯ ಯೋಚನೆ ಮತ್ತು ಗುರಿ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪಿಎಸ್‌ಐ ಬಸಗೌಡ ನೇರಲಿ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಪದವಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎನ್‌ಸಿಸಿ ಘಟಕ ಮತ್ತು ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾದಕದ್ರವ್ಯ ವ್ಯಸನ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನರು ದೇಶದ ಸಂಪತ್ತು. ಹಿರಿಯರ ಮಾರ್ಗದರ್ಶನ ಮೂಲಕ ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು ಎಂದರು.
ಪಿಎಸ್‌ಐ ಚೇತನ ಪಾಟೀಲ ಮಾತನಾಡಿದರು. ಕಾಲೇಜು ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ, ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಸಿದ್ದಣ್ಣ ನಾಯಕ ಇತರರು ಇದ್ದರು. ದಿವ್ಯಶ್ರೀ ನೆರಲಿ, ಸುಕನ್ಯಾ ಮಂಗುತ್ತೆ ನಿರೂಪಿಸಿದರು. ಸೃಷ್ಟಿ ಅಮ್ಮಣಗಿ ವಂದಿಸಿದರು.