ಹಿಡಕಲ್ ಡ್ಯಾಂನಲ್ಲಿರುವ ಬಸವೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜ್‌ನಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಮಲ್ಲಯ್ಯ ಸ್ವಾಮೀಜಿ, ಗುರಪ್ಪ ತಳವಾರ, ಮಹೇಶ ದೇಶಪಾಂಡೆ ಇತರರಿದ್ದರು. 
ಬೆಳಗಾವಿ

ವಿದ್ಯಾರ್ಥಿಗಳು ಸಕಾರಾತ್ಮಕ ವಿಚಾರ ಸ್ವೀಕರಿಸಲಿ

ವಿದ್ಯಾ ಶೆಟ್ಟನಗೌಡ್ರ
ಉಳ್ಳಾಗಡ್ಡಿ-ಖಾನಾಪುರ: ವಿದ್ಯಾರ್ಥಿಗಳು ನಕಾರಾತ್ಮಕ ವಿಚಾರಗಳಿಗೆ ಕಿವಿಗೊಡದೆ, ಸಕಾರಾತ್ಮಕ ವಿಚಾರ ಸ್ವೀಕರಿಸಬೇಕು ಎಂದು ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಹೇಳಿದರು.
ಸಮೀಪದ ಹಿಡಕಲ್ ಡ್ಯಾಂನಲ್ಲಿರುವ ಬಸವೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸ್ನೇಹಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿನಿಯರಾದ ಸುಪ್ರೀಯಾ ಹರಿಜನ, ತೇಜಸ್ವಿನಿ ವಡ್ಡರ ಅನಿಸಿಕೆ ಹಂಚಿಕೊಂಡರು.
ಸುಲ್ತಾನಪುರ ಎಸ್‌ಬಿಇ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗುರಪ್ಪ ತಳವಾರ, ಸಾಹಿತಿ ಮಹೇಶ ದೇಶಪಾಂಡೆ, ಪ್ರಾಚಾರ್ಯ ಆರ್.ಎಸ್.ನಾಶಿಪುಡಿ, ನಿವೃತ್ತ ಪ್ರಾಚಾರ್ಯ ಎಂ.ಎಲ್.ಮಗದುಮ್ಮ, ನಿವೃತ್ತ ಉಪನ್ಯಾಸಕ ಎ.ಎಲ್.ದಳವಾಯಿ, ಉಪನ್ಯಾಸಕರಾದ ಎಸ್.ಸಿ.ಪಾಟೀಲ, ಆರ್.ಜಿ.ಹವಾಲ್ದಾರ್, ಎ.ಬಿ.ಗುರಕನವರ, ಆರ್.ಆರ್.ಹಿರೇಮನಿ, ಎಸ್.ಎ.ಮಲನಾಯಕ, ವಿ.ಎಸ್.ತಳವಾರ, ಸಿಬ್ಬಂದಿ ಎಂ.ಡಿ.ಮಗದುಮ್ಮ, ಎಂ.ಆರ್. ಬಾಗೇವಾಡಿ, ಬಿ.ಜಿ.ಕಾಂಬಳೆ ಇತರರಿದ್ದರು.