ರಾಮದುರ್ಗ ಪಟ್ಟಣದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರೇರಣಾ ತರಬೇತಿ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ರಮೇಶ ಬಲ್ಲಿದ, ಎಸ್.ಆರ್.ಕಾಂಬಳೆ, ಹನುಮಂತರಾಯ ಬಿರಾದಾರ ಇತರರಿದ್ದರು. 
ಬೆಳಗಾವಿ

ವಿದ್ಯಾರ್ಥಿಗಳು ಉನ್ನತ ಗುರಿ ಹೊಂದಲಿ

ರಾಘವೇಂದ್ರಗೌಡ ಭೀ ಪಾಟೀಲ್
ಪಟ್ಟಣದ ಪ್ರಗತಿ ಸಭಾಭವನದಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಬ್ಯಾಂಕ್ ಆಫ್ ಬರೋಡಾ ಸಂಯುಕ್ತ ಆಶ್ರಯದಲ್ಲಿ ಐಎಎಸ್ ಅಧಿಕಾರಿ ದಿ.ಮಹಾಂತೇಶ ಬೀಳಗಿ ಅವರ ಸ್ಮರಣಾರ್ಥ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಪ್ರೇರಣಾ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಬಿಇಒ ಎಸ್.ಆರ್.ಕಾಂಬಳೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಭವಿಷ್ಯ ರೂಪಿಸಿಕೊಳ್ಳಲು, ಉನ್ನತ ವ್ಯಾಸಂಗ ಆಯ್ಕೆ ಮಾಡಲು ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟವಾಗಿದೆ ಎಂದರು.
ಬ್ಯಾಂಕ್ ಬರೋಡಾ ಶಾಖಾ ವ್ಯವಸ್ಥಾಪಕ ಹನುಮಂತರಾಯ ಬಿರಾದಾರ ಮಾತನಾಡಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ.ಎಣಿ, ಜಿಲ್ಲಾ ಸಹಕಾರ್ಯದರ್ಶಿ ವಿರೇಶ ಗಣಾಚಾರಿ, ಹೊರ್ತಿಯ ಸೂರ್ಯೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರೇವಣಸಿದ್ದಪ್ಪ ಪೂಜಾರಿ, ಎಸ್.ಎನ್. ಕರಲಿಂಗಪ್ಪನವರ, ಜಿ. ಎನ್ ಶೇಖ, ಬ್ಯಾಂಕ್ ಆ್ ಬರೋಡಾ ಸಹ ವ್ಯವಸ್ಥಾಪಕ ಶಿವಕುಮಾರ ಉಡುಮುಡಿ ಇತರರಿದ್ದರು. ಎ.ವಿ.ಪಾಟೀಲ ಸ್ವಾಗತಿಸಿದರು. ಮಾರುತಿ ಜಂಗವಾಡ ನಿರೂಪಿಸಿದರು.